Suddilive || Shivamogga
ಒಂದು ಕಳುವು ಪ್ರಕರಣದಿಂದ ಪತ್ತೆಯಾಗಿದ್ದು 16 ಪ್ರಕರಣಗಳು-16 cases detected from one theft case
ಬೈಕ್ ಕಳುವು ಪ್ರಕರಣ ಬೇಧಿಸಲು ಹೊರಟ ಶಿಕಾರಿಪುರದ ಪೊಲೀಸರಿಗೆ ಅಧ್ಬುತ ಭೇಟೆ ಸಿಕ್ಕಿದೆ. 1 ಕಳುವು ಪ್ರಕರಣದಿಂದ 16 ಪ್ರಕರಣಗಳು ಬೆಳಕಿಗೆ ಬಂದಿದೆ.
ಏ.25 ರಂದು ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಬೇದಾರ್ ಕೇರಿಯ ವಾಸಿ ಫೈಜಾನ್ ಭಾಷಾ 38 ವರ್ಷ ರವರ ಬಜಾಜ್ ಪಲ್ಸರ್ ಬೈಕ್ ಅನ್ನು ಕಳವು ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಬೈಕ್ ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ್ ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು ಸಂತೋಷ್ ಪಾಟೀಲ್, ಪೊಲೀಸ್ ವೃತ್ತ ನಿರೀಕ್ಷಕರು, ಶಿಕಾರಿಪುರ ಟೌನ್ ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಶರತ್ ಪಿಎಸ್ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಎಎಸ್ಐ ಮಲ್ಲೇಶಪ್ಪ, ವಿಶ್ವನಾಥ್, ಹೆಚ್ ಸಿ ರವರಾದ ಸಂದೀಪ್ ಗಂಗಾಧರ್, ಸಿಪಿಸಿ ರವರಾದ ಶಿವಾಜಿ, ಗಿರೀಶ್, ಕೊಟ್ರೇಶ್, ಕುಮಾರ್, ಗಜೇಂಧ್ರ, ವಿಜಯ್, ಚೇತನ್ ನಾಗರಾಜ್ ನವೀನ್, ರಾಜ್ ಕುಮಾರ್, ಜಯಶೀಲ, ವೀರೇಶ್ ಹಾಗೂ ತಾಂತ್ರಿಕ ವಿಭಾಗದ ಹೆಚ್ ಸಿ ಇಂದ್ರೇಶ್ ಮತ್ತು ಎ ಹೆಚ್ ಸಿ ಕೃಷ್ಣಪ್ಪ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ಪ್ರಕರಣದ ಆರೋಪಿತರಾದ ಪ್ರತಾಪ್, 33 ವರ್ಷ, ದೊಡ್ಡಲಿಂಗೇನಹಳ್ಳಿ, ತರೀಕೆರೆ ಚಿಕ್ಕಮಗಳೂರು ಮತ್ತು ಭೋಜರಾಜ, 32 ವರ್ಷ, ಬಿಳಚೋಡ್ ಗ್ರಾಮ, ಜಗಳೂರು ದಾವಣಗೆರೆ ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಇಬ್ಬರು ಆರೋಪಿತರಿಂದ ಈ ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ವರದಿಯಾದ
ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ 01, ಅರಸೀಕೆರೆ ಪೊಲೀಸ್ ಠಾಣೆಯ 01, ತರೀಕೆರೆ ಪೊಲೀಸ್ ಠಾಣೆಯ 02, ಚನ್ನರಾಯ ಪಟ್ಟಣ ಪೊಲೀಸ್ ಠಾಣೆಯ 01, ಶಿರಾ ಪೊಲೀಸ್ ಠಾಣೆಯ 01, ಚಿತ್ರದುರ್ಗ ಪೊಲೀಸ್ ಠಾಣೆಯ 01, ಜಗಳೂರು ಪೊಲೀಸ್ ಠಾಣೆಯ 01, ಕೂಡ್ಲಿಗಿ ಪೊಲೀಸ್ ಠಾಣೆಯ 01, ಕೊಟ್ಟೂರು ಪೊಲೀಸ್ ಠಾಣೆಯ 01, ಹಗರೀ ಬೊಮ್ಮನ ಹಳ್ಳಿ ಪೊಲೀಸ್ ಠಾಣೆಯ 01, ಹೊಸಪೇಟೆ ಪೊಲೀಸ್ ಠಾಣೆಯ 01, ಬೆಂಡೆಗೇರೆ ಪೊಲೀಸ್ ಠಾಣೆಯ 01, ಮುನಿರಾಬಾದ್ ಪೊಲೀಸ್ ಠಾಣೆಯ 01, ಮುಂಡರಗಿ ಪೊಲೀಸ್ ಠಾಣೆಯ 01 ಮತ್ತು ಹೂವಿನ ಹಡಗಲಿ ಪೊಲೀಸ್ ಠಾಣೆಯ 01 ಸೇರಿ ಅಂದಾಜು ಮೌಲ್ಯ 20,50,000/- ರೂಗಳ ಒಟ್ಟು 16 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
detected from one theft case