ಜಾತಿಗಣತಿ ಮತ್ತು ಜನಿವಾರ ತೆಗೆಸಿದ ಘಟನೆಯನ್ನ ಖಂಡಿಸಿದ ಜಿಲ್ಲಾ ವಿಶ್ವಕರ್ಮ ಮಹಾಸಭಾ- condemns caste census and Janiwara incident

 Suddilive || Shivamogga

ಜಾತಿಗಣತಿ ಮತ್ತು ಜನಿವಾರ ತೆಗೆಸಿದ ಘಟನೆಯನ್ನ ಖಂಡಿಸಿದ ಜಿಲ್ಲಾ ವಿಶ್ವಕರ್ಮ ಮಹಾಸಭಾ-District Vishwakarma Mahasabha condemns caste census and Janiwara incident

Condemns, caste

ವಿಶ್ವಕರ್ಮ ಸಮಾಜದ ಜಾತಿ ಜನಗಣತಿ ಮರು ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯರಿಗೆ ಜಿಲ್ಲಾ ವಿಶ್ವಕರ್ಮ ಮಹಾಸಭಾ ಇಂದು ಸುದ್ದಿಗೋಷ್ಟಿ ನಡೆಸಿದೆ. 

ಮಹಾಸಭಾದ ಅಗರದಳ್ಳಿ ನಿರಂಜನ ಮೂರ್ತಿ ಮಾತನಾಡಿ, ಸರ್ಕಾರದ ಜಾತಿಜನಗಣತಿ ತಪ್ಪಾಗಿದೆ. ವರದಿಯಲ್ಲಿ ರಾಜ್ಯದಲ್ಲಿ ವಿಶ್ವಕರ್ಮ ಸಮಾಜ 6 ಲಕ್ಷದ 85 ಸಾವಿರ ಎಂದು ಬಿಡುಗಡೆ ಮಾಡಿದೆ. ನಾವು 30 ಲಕ್ಷ ಜನಸಂಖ್ಯೆ ಇದೆ. 

42 ಒಳಪಂಗಡವಿದೆ. ಕ್ರಿಶ್ಚಿಯನ್ ಒಳಪಂಗಡದ ಮೇಲೆ ಒಡೆಯಲಾಗಿದೆ. ವಿಶ್ವಕರ್ಮ ಕ್ರಿಶ್ಚಿಯನ್ ಎಂದು ಪಂಗಡ ವಿಂಗಡಿಸಲಾಗಿದೆ. ನಾವು ಕ್ರಿಶ್ಚಿಯನ್ ನಲ್ಲಿ ವಿಶ್ವಕರ್ಮ ಎಂದು ಹೇಗೆ ಬಂದ್ವಿ ಗೊತ್ತಿಲ್ಲ. ನಾವೇ ಜಾತಿಗಣತಿ ವರದಿ ಕೊಡಲು ಸಿದ್ದವಿದ್ದೇವೆ. ಅದನ್ನ ಸ್ವೀಕರಿಸಲಿ ಎಂದು ತಿಳಿಸಿದರು. 

10 ವರ್ಷಗಳ ಹಿಂದಿನ ವರದಿಯಾಗಿರುವ ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ. ನಾವು ಅಲ್ಪಸಂಖ್ಯಾತರಿದ್ದೇವೆ. 6 ಲಕ್ಷದ 85 ಸಾವಿರ ಜನಗಣತಿ ಎಂದು ನಮೂನೆಯಾದರೆ ನಮ್ಮನ್ನ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿಯಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. 

ರಾಮಣ್ಣ ಮಾತನಾಡಿ, ಎಲ್ಲೂ ಗಣತಿಯನ್ನ ಅಧಿಕೃತವಾಗಿ ಗಣನೆ ಮಾಡಿಲ್ಲ. ಪುನರ್ ಪರಿಶೀಲಿಸಬೇಕು. ಜಾತಿ ಜನಗಣತಿ ವರದಿಯನ್ನ ತಕ್ಷಣವೇ ರದ್ದು ಮಾಡಬೇಕು. ರದ್ದು ಮಾಡದಿದ್ದರೆ ಈಗಾಗಲೇ ಸಭೆ ನಡೆಸಲಾಗಿದೆ ಅಂತಿಮವಾಗಿ ಸಭೆ ನಡೆಸಿ ಸಮಾಜ ಬೀದಿಗೊಳಿದು ಹೋರಾಡಲಿದ್ದೇವೆ ಎಂದರು. 

ಬೇರೆ ಹಿಂದುಳಿದ ವರ್ಗಗಳು ಕಾಂತರಾಜು ವರದಿ ಸರಿಇದೆ ಎಂದಿವೆ ನೀವು ವಿರೋಧಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಗರದಳ್ಳಿ ನಿರಂಜನಮೂರ್ತಿ ಯಾರು ವರದಿ ಸರಿಯಿದೆ ಎಂದಿರುವ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆ ಸರಿಯಿದೆ ಎನಿಸಿದೆ ನಮ್ಮ ಜನಸಂಖ್ಯೆ ಸರಿಯಿಲ್ಲ ಎಂದು ವಿವರಿಸಿದರು. 

ಜನಿವಾರವನ್ನ ತೆಗೆಸಿದ ಪ್ರಕರಣವನ್ನ ಖಂಡಿಸಿದ ನಿರಂಜನಮೂರ್ತಿಗಳು ಹಿಙದೂಗಳ ಭಾವನೆಗೆ ಸರ್ಕಾರ ಈಗ ಕೈಹಾಕಿದೆ ನಾಳೆ ನೀವುಗಳು ಹಿಂದೂಗಳೆ ಅಲ್ಲ ಎನ್ನುವ ಪರಿಸ್ಥಿತಿಗೆ ಸರ್ಕಾರ ಹೋಗಬಹುದು. ಜನಿವಾರ ವಿಶ್ವಕರ್ಮ ಜನಾಂಗದವರು ಧರಿಸುವ ಪವಿತ್ರವಾಗಿದೆ ಎಂದು ತಿಳಿಸಿದರು. 

condemns caste census and Janiwara incident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close