Suddilive || Shivamogga
ಉಗ್ರರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ-Various organizations protest in Shivamogga condemning terrorist attacks
ಉಗ್ರರ ದಾಳಿಗೆ ಶಿವಮೊಗ್ಗದ ಮಂಜುನಾಥ ರಾವ್ ಅವರ ಸಾವಿಗೆ ಇಂದು ಹಲವಾರು ಸಂಘಟನೆಗಳು ಘಟನೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿವೆ.
ಉಗ್ರರ ಉಪಟಳದಿಂದ ಕಾಶ್ಮೀರಲ್ಲಿ 30 ಜನ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇದರಲ್ಲಿ ಶಿವಮೊಗ್ಗದ ಮಂಜುನಾಥ್ ಉಗ್ರರ ಮೊದಲ ಗುಂಡಿಗೆ ಬಲಿಯಾಗಿದ್ದರು. ಮಂಜುನಾಥ್ ಅವರ ಸಾವಿಗೆ ಇಂದು ಗೋಪಿವೃತ್ತದಲ್ಲಿ ಕರವೇ ಸಿಂಹಸೇನೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಮಧುಸೂಧನ್ ಅವರ ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಸಿ ಉಗ್ರರ ಅಟ್ಟಹಾಸಕ್ಕೆ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವಂಂತೆ ಆಗ್ರಹಿಸಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಗಿದೆ. ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಶಾಂತಿ ನೆಡಿಗೆ ಸಮಿತಿ ಗೋಪಿ ವೃತ್ತದಲ್ಲಿ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಭೆ ನಡೆಸಿದೆ. ಈ ವೇಳೆ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ಸ್ವಾಮಿಗಳು, ಬಸವ ಕೇಂದ್ರದ ಸ್ವಾಮೀಜಿಗಳು, ಕ್ಲಫರ್ಡ್ ರೋಷನ್ ಫಾದರ್ ಹಾಗೂ ಶ್ರೀಪಾಲ್ ನೇತೃತ್ವದಲ್ಲಿ ಶಾಂತಿ ಸಭೆ ನಡೆದಿದೆ.
ಶಿವಮೊಗ್ಗದ ಎಎ ವೃತ್ತದಲ್ಲಿ ಎಸ್ ಡಿಪಿಐ ಸಹ ಉಗ್ರರ ದಾಳಿ ಖಂಡಿಸಿ ಕ್ಯಾಂಡಲ್ ದೀಪ ಹಚ್ಚಿ ಪ್ರತಿಭಟನೆ ನಡೆದಿದೆ. ಅದರಂತೆ ಜಿಲ್ಲಾ ಯುವ ಕಾಂಗ್ರೆಸ್ ಹರ್ಷಿತ್ ಗೌಡ ನೇತೃತ್ವದಲ್ಲಿ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ಕಾಶ್ಮೀರಿ ಪ್ರವಾಸಿಗರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
condemning terrorist attacks