ಎರಡು ದಿನ ಡಿಸಿ ಕಚೇರಿ ಎದುರಿನ ಮೈದಾನ ದಲ್ಲಿ ಪಾರ್ಕಿಂಗ್ ಬಂದ್! closed for two days!

Suddilive || shivamogga

ಎರಡು ದಿನ ಡಿಸಿ ಕಚೇರಿ ಎದುರಿನ ಮೈದಾನದಲ್ಲಿ ಪಾರ್ಕಿಂಗ್ ಬಂದ್! -Parking in the field in front of the DC office closed for two days!

Closed, twodays


ಶಿವಮೊಗ್ಗ ಡಿಸಿ ಕಚೇರಿ ಎದುರಿನ ಈಗ ಮೈದಾನದ ಮಾಲೀಕತ್ವ ವಿವಾದ ಹಿನ್ನೆಲೆಯಲ್ಲಿ ನಡೆದ‌ ಪ್ರತಿಭಟನೆ ಮತ್ತು ಶಾಂತಿಯುತ ಸಭೆ ನಡೆದಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಡಿಸಿ ಕಚೇರಿ ಈದ್ಗಾ  ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ಕೆಲವೊಂದು ಘಟನೆ ನಡೆದಿದೆ. ಇಂದು ಡಿಸಿ ಕಚೇರಿ ಬಳಿ ದರ್ಗಾ ಕಮಿಟಿ ಅವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ಸಹ ನಡೆದಿದೆ. ತಮ್ಮ ಬೇಡಿಕೆಯ ಕುರಿತಂತೆ ಅವರು ಮನವಿಯನ್ನು ಸಹ ಸಲ್ಲಿಸಿದ್ದಾರೆ

ಈ ಜಾಗ ವಕ್ಪ್ ಗೆ ಸೇರಿದ್ದು ಎಂದು ಅವರು ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ಸಹ ನಮಗೆ ಅವರು ನೀಡಿದ್ದಾರೆ. ನಾವು ವಕ್ಫ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಜಾಗ ಅವರದಾಗಿದ್ದರೆ ನಾವು ಅವರಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. 

ಅದಕ್ಕೆ ಸಂಬಂಧಪಟ್ಟಂತೆ ಅವರು ಕೆಲಸಗಳನ್ನು ಮಾಡಿಕೊಂಡು ಹೋಗಬಹುದು. ಹಾಗೆ ಅಲ್ಲಿ ಬ್ಯಾರಿಕೇಡ್ ಗಳನ್ನು ಸದ್ಯಕ್ಕೆ ಹಾಕುವುದು ಬೇಡ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಇಲಾಖೆಯವರು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಅಲ್ಲಿ ಕೇವಲ ಪಾರ್ಕಿಂಗ್ ವಿಚಾರ ಅಷ್ಟೇ ಇಲ್ಲ, ಆ ಜಾಗ ವಕ್ಫ್ ಗೆ ಗೆ ಸೇರಿದ್ದು ಎಂದು ಅವರು ಹೇಳುತ್ತಿದ್ದಾರೆ

ಹಾಗಾಗಿ ವಿವಾದ ಬಗೆ ಹರಿಯುವ ತನಕ ಪಾರ್ಕಿಂಗ್ ಗೆ ಅವಕಾಶ ನೀಡುವುದು ಬೇಡ ಎಂದು ನಿರ್ಧರಿಸಲಾಗಿದೆ. ಮಹಾನಗರ ಪಾಲಿಕೆ ಹಾಗೂ ಮುಸ್ಲಿಂ ಸಮುದಾಯದವರು ನೀಡಿರುವ ದಾಖಲೆಗಳನ್ನು ನಾವು ಪರಿಶೀಲನೆ ನಡೆಸುತ್ತೇವೆ. ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕು ಆ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು.

ಇಂದು ನಡೆದ ಸಭೆಯಲ್ಲಿ ಕೇವಲ ಈದ್ಗಾ ಮೈದಾನದ ವಿಚಾರ ಅಷ್ಟೇ ಅಲ್ಲ, ಮುಸ್ಲಿಂ ಸಮಾಜ ಎದುರಿಸುತ್ತಿರುವ ಕೆಲವೊಂದು ವಿಚಾರಗಳನ್ನ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ನಾವು ಭರವಸೆ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಹೋರಾಟವನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಯಾವುದೇ ರೀತಿಯ ತೊಂದರೆ ಇಲ್ಲದಂತೆ ವಾಣಿಜ್ಯ ಚಟುವಟಿಕೆ ನಡೆಸಲು ಅನುವು ಮಾಡಿಕೊಡಲಾಗುತ್ತದೆ.

closed for two days!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close