Suddilive || Shivamogga
ಜಿಲ್ಲೆಯಲ್ಲಿನ 06 ಮಕ್ಕಳ ಪಾಲನಾ ಸಂಸ್ಥೆಗಳ ಪರವಾನಗಿ ರದ್ದು-Licenses of 06 childcare institutions in the district cancelled
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಅದೇಶದನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆ,2015ರ ಸೆಕ್ಷನ್ 41 (1) ರಡಿ ನೋಂದಾಯಿಸಲ್ಪಟ್ಟಿರುವ 6 ಮಕ್ಕಳ ಪಾಲನಾ ಸಂಸ್ಥೆಗಳನ್ನ ರದ್ದುಗೊಳಿಸಲಾಗಿದೆ.
ಆಶಾ ಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ವಿದ್ಯಾನಗರ, ಶಿವಮೊಗ್ಗ, ತರಂಗ ಕಿವುಡು ಮಕ್ಕಳ ಹಿರಿಯ ವಸತಿ ಶಾಲೆ, ಬಸವೇಶ್ವರನಗರ, ಶಿವಮೊಗ್ಗ, ತರಂಗ ಕಿವುಡು ಮಕ್ಕಳ ವಸತಿ ನಿಲಯ, ನ್ಯೂಟೌನ್, ಭದ್ರಾವತಿ, ಮದರ್ ತೆರೆಸಾ ರೆಸಿಡೆನ್ಸಿಯಲ್ ಸ್ಕೂಲ್ ಫಾರ್ ಹಿಯರಿಂಗ್ ಇಂಪರ‍್ಡ್, ಭದ್ರಾವತಿ, ಮಾತೃಛಾಯ ಸರ್ವಧರ್ಮ ಸಂಸ್ಥೆ, ಸ್ವಾಮಿ ವಿವೇಕಾನಂದ ಬಡಾವಣೆ, ಗೋಪಾಳ, ಶಿವಮೊಗ್ಗ ಮತ್ತು ಸುಜ್ಞಾನ ಸಂಸ್ಥೆ,
ಶಾಂತಿನಗರ, ಶಿಕಾರಿಪುರ ತಾಲೂಕು ಈ 06 ಮಕ್ಕಳ ಪಾಲನಾ ಸಂಸ್ಥೆಗಳನ್ನು ಪಾಲನೆ, ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣ ಬಾಲನ್ಯಾಯ ಕಾಯ್ದೆ, 2015 ಸೆಕ್ಷನ್ 41(7)ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಸರ್ಕಾರಿ ಆದೇಶದನ್ವಯ ದಿ: 17/03/2025 ರಿಂದ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
childcare institution cancelled