ಅಂಗಡಿ ಮುಂಗಟ್ಟು ಬಂದ್ ಮಾಡಿ ಸಾಂಘಿಕ ವರ್ತಕರ ಪ್ರತಿಭಟನೆ-Union traders protest

Suddilive || Sagara

 ಅಂಗಡಿ ಮುಂಗಟ್ಟು ಬಂದ್ ಮಾಡಿ ಸಾಂಘಿಕ ವರ್ತಕರ ಪ್ರತಿಭಟನೆ-Union traders protest by closing shops

Protest, traders


ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಶನಿವಾರ ಸಾಂಘಿಕ ವರ್ತಕರ ಸಂಘದ ವತಿಯಿಂದ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ  ಪ್ರತಿಭಟನೆ ನಡೆಸಿ, ಭಯೋತ್ಪಾದಕರ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆದು ಹಳೆ ಬಸ್ ನಿಲ್ದಾಣದಲ್ಲಿ ಖಂಡನಾ ಸಭೆ ನಡೆಸಲಾಯಿತು.

ಒಂದು ಸಂದರ್ಭದಲ್ಲಿ ಕೆಲವು ಅಂಗಡೀಮಾಲಕರು ಅಂಗಡಿಗಳು ಬಂದ್ ಮಾಡದೆ ಇರುವುದನ್ನು ನೋಡಿದ ಪ್ರತಿಭಟನಾಕಾರರು ಅಂಗಡಿ ಬಂದು ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಿರುವ ಘಟನೆ ಕೂಡ ನಡೆಯಿತು.

ಪಹಲ್ಗಾಮದಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಖಂಡನೀಯ. ಅತ್ಯಂತ ಧಾರುಣವಾಗಿ ಪ್ರವಾಸಿಗರನ್ನು ಕೊಲ್ಲಲಾಗಿದೆ. ಇದೊಂದು ಅಮಾನವೀಯ, ಮೃಗೀಯ ಘಟನೆಯಾಗಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಭದ್ರತಾ ವೈಫಲ್ಯ ಎಂದು ತೆಗಳುವ ಬದಲು ದುಷ್ಟರನ್ನು ಮಟ್ಟಹಾಕಲು ನೈತಿಕಧೈರ್ಯ ತುಂಬಬೇಕು ಎಂದು ಕರೆ ನೀಡಿದರು.

ಇದೊಂದು ಪೈಶಾಚಿಕ ಕೃತ್ಯವಾಗಿದೆ. ಪ್ರವಾಸಕ್ಕೆ ಬಂದವರ ಮೇಲೆ ಗುಂಡು ಹಾರಿಸಿದ್ದಾರೆ ಎಂದರೆ ಅವರಲ್ಲಿ ಮಾನವೀಯತೆ ಎನ್ನುವುದು ಕನಿಷ್ಟವೂ ಇಲ್ಲ. ಇಂತಹ ಘಟನೆ ನಡೆದಾಗ ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ಇಷ್ಟಾದರೂ ಕೆಲವರು ಪಾಕಿಸ್ತಾನವನ್ನು ವಹಿಸಿಕೊಂಡು ಮಾತನಾಡುತ್ತಿರುವುದು ಖಂಡನೀಯ. ಯಾರಿಗೆ ಪಾಕಿಸ್ತಾನದ ಮೇಲೆ ಅಭಿಮಾನ ಇದೆಯೋ ಅವರು ಅಲ್ಲೆ ಹೋಗಿ ವಾಸ ಮಾಡಲಿ. ಉಗ್ರವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕೇಂದ್ರ ಸರ್ಕಾರ ಭಯೋತ್ಪಾದಕರ ವಿರುದ್ದ ನಿರ್ಧಾಕ್ಷಿಣ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಪ್ರಮುಖರಾದ ಸವಿತಾ ವಾಸು, ಪ್ರೇಮ ಕಿರಣ್ ಸಿಂಗ್, ಮಧುರಾ ಶಿವಾನಂದ್, ಭಾವನಾ ಸಂತೋಷ್, ಗಣೇಶಪ್ರಸಾದ್, ಸುಳಗೋಡು ಗಣಪತಿ, ಅನಿಲ್, ಚಂದ್ರಶೇಖರ್, ಪ್ರತಿಮಾ ಜೋಗಿ, ಐ.ವಿ.ಹೆಗಡೆ, ಕೆ.ವಿ.ಜಯರಾಮ್, ದೇವೇಂದ್ರಪ್ಪ, ಕವಿತಾ ಜಯಣ್ಣ ಇನ್ನಿತರರು ಹಾಜರಿದ್ದರು.

Union traders protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close