Suddilive || Shivamogga
ಶಾಪದ ರೂಪದಲ್ಲಿ ಎದುರಾಯಿತಾ ಹೇಮಾವತಿಗೆ ದುಬಾರೆಯ ಭಾಗ್ಯ?Did Hemavati's bad luck come in the form of a curse?
ಸಕ್ರಬೈಲಿನ ಆನೆ ಬಿಡಾರದಿಂದ ಹೇಮಾವತಿ ಆನೆಯನ್ನ ದುಬಾರೆಗೆ ಕಳುಹಿಸಲಾಗುತ್ತಿದೆ. ದುಬಾರೆಯವರೆಗೆ ಹೊತ್ತೊಯ್ಯಲು ಲಾರಿಯೂ ಸಹ ಬಂದು ನಿಂತಿದೆ.
ಈ ರೀತಿ ಆನೆಗಳು ಶಿಫ್ಟಿಂಗ್ ಹೊಸದಲ್ಲ. ಆದರೆ ಸಕ್ರೆಬೈಲಿನಲ್ಲಿರುವ ಆನೆಗಳಲ್ಲಿ ಹೆಣ್ಣಾನೆ ಕಡಿಮೆಯಿರುವುದರಿಂದ ಹೆಣ್ಣಾನೆಯನ್ನೇ ಶಿಫ್ಟಿಂಗ್ ಮಾಡಲಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಸಕ್ರಬೈಲಿನ 25 ಆನೆಗಳಲ್ಲಿ ನಾಲ್ಕು ಹೆಣ್ಣಾನೆಗಳಿವೆ. ಮತ್ತೆರಡು ಹೆಣ್ಣಾನೆ ಮರಿಯಾಗಳಿವೆ.
ಉಳಿದ 21 ಆನೆಗಳು ಗಂಡಾನೆಗಳಾಗಿವೆ. 21 ಗಂಡಾನೆಗಳಿಗೆ ಹೇಮಾವತಿಯೂ ದುಬಾರೆಗೆ ಹೋದರೆ ಮೂರು ಹೆಣ್ಣಾನೆಗಳು ಉಳಿದುಕೊಳ್ಳುತ್ತವೆ. ಗಂಡಾನೆಗಳು ಬೆದೆಗೆ ಬಂದರೆ ಹೆಣ್ಣಾನೆಗಳಿದ್ದರೆ ಮಾತ್ರ ಮಾವುತನ ಮಾತು ಕೇಳ್ತವೆ. ಇಲ್ಲವೆಂದರೆ ಪರಿಸ್ಥಿತಿ ಮಿತಿ ಮೀರಲಿದೆ. ಈ ದೃಷ್ಠಿಯಿಂದ ಸಕ್ರೆಬೈಲು ಆನೆಗಳ ಸಂತೋನ್ಪತ್ತಿ ಕೇಂದ್ರವಲ್ಲವಾದರೂ ನಿಯಂತ್ರಣಕ್ಕೆ ಹೆಣ್ಣಾನೆಗಳ ಸಂಖ್ಯೆ ಅಗತ್ಯವಿದೆ.
ಇನ್ನು ಮರಿಗಳು ದೊಡ್ಡದಾಗುವವರೆಗೆ 15 ವರ್ಷಗಳು ಕಾಯಬೇಕಿದೆ. 15 ವರ್ಷಗಳ ವರೆಗೆ ಮೂರು ಹೆಣ್ಣಾನೆಗಳೇ ಉಳಿದ 21 ಆನೆಗಳನ್ನ ನಿಯಂತ್ರಿಸಬೇಕಿದೆ. ಗಂಡಾನೆಗಳು ಮದವೇರಿದರೆ ಸಾಕು ಅವುಗಳನ್ನ ನಿಯಂತ್ರಿಸಲು ಹೆಣ್ಣಾನೆಗಳ ಅವಶ್ಯಕತೆ ಇರುವುದರಿಂದ ಹೇಮಾವತಿಯನ್ನ ಶಿಫ್ಟಿಂಗ್ ಮಾಡುತ್ತಿರುವುದು ಅವೈಜ್ಞಾನಿಕ ಎಂಬುದು ತಜ್ಞರ ವಾದವಾಗಿದೆ.
ಡಿಸಿಎಫ್ ಪ್ರಸನ್ನ ಕುಮಾರ್ ಅವರು ಸುದ್ದಿಲೈವ್ ಗೆ ಮಾಹಿತಿ ನೀಡಿ ಪಿಸಿಸಿಎಫ್ ಆದೇಶದ ಮೇರೆಗೆ ಹೇಮಾವತಿಯನ್ನ ದುಬಾರೆಗೆ ಕಳುಹಿಸಲಾಗುತ್ತಿದೆ. ಮೂರು ಹೆಣ್ಣಾನೆಗಳು ಉಳಿದ ಹೆಣ್ಣಾನೆಯನ್ನ ನಿಯಂತ್ರಸಲಿಕ್ಕೆ ಸಾಕಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೇಮಾವತಿ ಫೆ7 ರಂದು ಕಾಡಾನೆ ಜೊತೆ ಸೇರಿ ಗಂಡು ಮರಿಗೆ ಜನ್ಮ ನೀಡಿತ್ತು. ಎದೆಹಾಲು ಉಣಿಸಲು ಸಾಧ್ಯವಾಗದ ಬೆನ್ನಲ್ಲೇ ಮರಿ ಅಸುನೀಗಿತ್ತು. ಹೇಮಾವತಿ 9½ ವರ್ಷದ ಹೆಣ್ಣಾನೆ ಆಗಿದ್ದು ಇತರೆ ಆನೆಗಳಿಗಿಂತ ಮೊದಲೆ ಅಂದರೆ ಅಪ್ರಾಪ್ತ ವಯಸ್ಸಿನಲ್ಲಿ ಮಗುವುಗೆ ಜನ್ಮ ನೀಡಿ ಕಳೆದುಕೊಂಡ ಹೆಣ್ಣಾನೆಯಾಗಿದೆ. ಹೇಮಾವತಿಗೆ ಶಿಕ್ಷೆಯ ರೂಪದಲ್ಲಿ ಈ ಶಿಫ್ಟಿಂಗ್ ಎದುರಾಯಿತ ಎಂಬ ಅನುಮಾನವೂ ಕಾಡಲಾರಂಭಿಸಿದೆ. ಹೇಮಾವತಿ ಸಕ್ರೆಬೈಲಿನಲ್ಲೇ ಹುಟ್ಟಿಬೆಳೆದ ಹೆಣ್ಣಾನೆಯಾಗಿದೆ. ಇದು ಸಕ್ರೆಬೈಲಿನ ಆಸ್ಮಿತೆಯೂ ಹೌದು!
bad luck come in the form of a curse