ಯಾಸಿನ್ ಖುರೇಶಿ, ಲಾಂಗು ಮತ್ತು ಭಯಬೀಳಿಸುವ ಮ್ಯೂಸಿಕ್-Yasin Qureshi

Suddilive || Shivamogga

ಯಾಸಿನ್ ಖುರೇಶಿ, ಲಾಂಗು ಮತ್ತು ಭಯಬೀಳಿಸುವ ಮ್ಯೂಸಿಕ್-Yasin Qureshi, the music of longing and dread


Yasin, Qureshi


2024 ರಲ್ಲಿ ಶಿವಮೊಗ್ಗದ ಗ್ಯಾಂಗ್ ವಾರ್ ನಲ್ಲಿ ಯಾಸಿನ್ ಖುರೇಶಿ ಹತನಾದರೂ ಆತನ ಜೊತೆಯ ಫೊಟೊ, ಫ್ಲೆಕ್ಸ್ ಗಳನ್ನ ಹಾಕಿಕೊಂಡು ಆತನ ಅಭಿಮಾನಿಗಳು ಅಭಿಮಾನ ಮೆರೆಯುತ್ತಿರುವುದು ಮಾಮೂಲಿಯಾದರೂ ಇಲ್ಲೊಬ್ಬ ವ್ಯಕ್ತಿ ಆತನ ಜೊತೆಗೆ ಲಾಂಗ್ ಹಿಡಿದು ಜನರನ್ನ ಭಯಬೀಳಿಸುವ ಹಿನ್ನಲೆಯ ಸಂಗೀತ ಹಾಕಿಕೊಂಡವನ ವಿರುದ್ಧ ಕೇಸ್ ದಾಖಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಯಾಸೀನ್ ಖುರೇಶಿ ಜೊತೆಗೆ ಲಾಂಗ್ ಹಿಡಿದು ಓಮಿನಿ ಕಾರಿನಲ್ಲಿ ಕೆಳಗೆ ಇಳಿದ ವಿಡಿಯೋ ಹರಿದು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಜುನೈದ್ ಖುರೇಶಿ ಎಂಬುವನು ಇನ್ ಸ್ಟಾಗ್ರಾಂ ಐ.ಡಿ Y.Q QURESHI KING ಯಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಮೊಹಮ್ಮದ್ ವಾಜಿ ಜೂಲ್ಮೀಕರ್ ಎಂಬಾತ ಲಾಂಗ್ ನ್ನು ಹಿಡಿದುಕೊಂಡು ಒಂದು ವಿಡಿಯೋ ವಿಡೀಯೋ ಹರಿಬಿಟ್ಟಿದ್ದ.

ಇನ್ ಸ್ಟಾಗ್ರಾಂ ಐ.ಡಿಯನ್ನು  ಪರಿಶೀಲಿಸಿ ನೋಡಿದಾಗ ಅದರಲ್ಲಿ ಈಗಾಗಲೇ ಮೃತ ಪಟ್ಟಿರುವ ಯಾಸಿನ್ ಖುರೇಶಿ ಎಂಬುವರೊಂದಿಗೆ ಕೆಲವು ಹುಡುಗರು ಭರ್ಚಿಯನ್ನು ಎತ್ತಿ ಹಿಡಿದಿರುವುದು, ನಂತರ 5-6 ಹುಡುಗರು ನಡೆದುಕೊಂಡು ಬರುವ ದೃಶ್ಯವಿತ್ತು.

ನಂತರದಲ್ಲಿ ಮೊಹಮ್ಮದ್ ವಾಜಿ ಜೂಲೈಕರ್ ಎಂಬ ವ್ಯಕ್ತಿಯು ತನ್ನ ಸ್ನೇಹಿತರೊಂದಿಗೆ ಲಾಂಗ್ ನ್ನು ಹಿಡಿದುಕೊಂಡು ಮಾರುತಿ ಓಮಿನಿಯಿಂದ ಕೆಳಗೆ ಇಳಿದು ಲಾಂಗ್ ನ್ನು ಬೆದರಿಕೆ ಹಾಕುವ ರೀತಿಯಲ್ಲಿ ತೋರಿಸುತ್ತಿರುವ 20 ಸೆಕೆಂಡ್ ಗಳ ವಿಡಿಯೋ ಲಭ್ಯವಾಗಿದೆ, ಈ ವಿಡಿಯೋಗೆ ಭಿತಿ ಹುಟ್ಟಿಸುವ ಹಿನ್ನಲೆ ಗಾಯನವನ್ನ ಅಳವಡಿಸಲಾಗಿತ್ತು. 

ಲಾಂಗ್ ನ್ನು ಹಿಡಿದು ಓಮಿನಿಯಿಂದ ಇಳಿದವನ  ಮೊಹಮ್ಮದ್ ವಾಜಿ ಜೂಲೈಕರ್ ಬಿನ್ ಮೆಹಬೂಬ್ ವಾಸ 6 ನೇ ಕ್ರಾಸ್ ಬೈ ಪಾಸ್ ರಸ್ತೆ, ನ್ಯೂ ಮಂಡಿ, ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Yasin Qureshi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close