Suddilive || Shivamogga
ಒಂದ್ಕಡೆ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಕಡಿಮೆಯಾದ ಬೆನ್ನಲ್ಲೇ ಡಿಸೇಲ್ ಮತ್ತು ಪೆಟ್ರೋಲ್ ದರವನ್ನ 20 ಪೈಸೆಯಿಂದ 30 ಪೈಸೆಯವರೆಗೆ ಇಳಿಸಿದೆ. ಅದರ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲ್ ದರ ಏರಿಸದೆ ಡಿಸೇಲ್ ದರಕ್ಕೆ ತೆರಿಗೆ ವಿಧಿಸಿ ಹೆಚ್ಚಿಸಿದೆ.
2 ರೂ ಹೆಚ್ಚಿಸಿ ರಾಜ್ಯ ಸರ್ಕಾರ ಮಧ್ಯರಾತ್ರಿಯಿಂದಲೆ ಡಿಸೇಲ್ ದರವನ್ನ ಜಾರಿಗೆ ತಂದಿದೆ. ಇದರಿಂದ ರಾಜ್ಯಾದ್ಯಂತ ಡಿಸೇಲ್ ದರ ಏರಿಕೆಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ಏನಾಗಿದೆ? ನೋಡೋಣ ಬನ್ನಿ!
ನಿನ್ನೆ ಒಂದೇ ದಿನ 90.25 ರೂ.ಯಿದ್ದ ಡಿಸೇಲ್ 90.05 ರೂ.ಗೆ ಇಳಿದರೂ ರಾಜ್ಯ ಸರ್ಕಾರದ ತೆರಿಗೆ ಹೆಚ್ಚಳದಿಂದ ಮಧ್ಯಾರಾತ್ರಿಯಿಂದ ಇದರ ದರ 92.07 ರೂ.ಗೆ ಏರಿಕೆಯಾಗಿದೆ. ಅಲ್ಲಿ 2.02 ರೂ. ಹೆಚ್ಚಳವಾಗಿದೆ. ಸಧ್ಯಕ್ಕೆ ಪೆಟ್ರೋಲ್ ಗೆ ತೆರಿಗೆ ವಿಧಿಸದ ಹಿನ್ನಲೆಯಲ್ಲಿಯಲ್ಲಿ ಹೆಚ್ಚಳದಿಂದ ಬಜಾವ್ ಆಗಿದೆ.
103.86 ರೂ. ಪೆಟ್ರೋಲ್ ದರವಿದ್ದರೆ. ಪವರ್ ಪೆಟ್ರೋಲ್ 111.62 ರೂ.ವಿದೆ. ಡಿಸೇಲ್ 92.07 ರೂವಿದ್ದರೆ, ಎಕ್ಸಟ್ರಾ ಜೆಟ್ (ಡಿಸೇಲ್) 95.64 ರೂ.ಗಳಾಗಿವೆ.
What is the diesel price in Shivamogga