Suddilive || Shivamogga
UT Khadar visits deceased Manjunatha's house, mother cries saying God didn't hold her hand!
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮಂಜುನಾಥ್ ರಾವ್ ಮೃತಪಟ್ಟಿದ್ದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಬಂದ ಸಭಾಧ್ಯಕ್ಷ ಯು.ಟಿ.ಖಾದರ್ ಎದುರು ಕಣ್ಣೀರಾಗಿದೆ.
ಮಂಜುನಾಥ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಖಾದರ್ ಸಾಂತ್ವಾನ ಹೇಳಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದು, ಮಂಜುನಾಥ್ ಪತ್ನಿ ಪಲ್ಲವಿಗೆ ಧೈರ್ಯ ಹೇಳಿದ್ದಾರೆ. ಸ್ಪೀಕರ್ ಗೆ ಸಾಥ್ ನೀಡಿದ ಶಾಸಕ ಚನ್ನಬಸಪ್ಪ, ಎಂಎಲ್ಸಿ ಬಲ್ಕಿಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾರ್, ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸಾತ್ ನೀಡಿದ್ದರು.
ಯುಟಿ ಖಾದರ್ ಮಂದೆ ಮೃತ ಮಂಜುನಾಥ್ ಅವರ ತಾಯಿ ಸುಮತಿ ಕಣ್ಣೀರು ಹಾಕಿದ್ದಾರೆ. ಕಾಶ್ಮೀರಕ್ಕೆ ಪ್ರವಾಸ ಬೇಡ ಎಂದಿದ್ದೆ. ಮಗ ಈಗ ಬೆಂಗಳೂರು ಆದಂತೆ ಕಾಶ್ಮೀರವಾಗಿದೆ. ಮನೆಯ ಸುತ್ತಮುತ್ತಲಿನವರು ಹೋಗಿ ಬಂದಿದ್ದಾರೆ. ನಾನು ಹೋಗಿ ಬರುವೆ ಎಂದು ಹೇಳಿದ್ದ
ನಾವು ಮಲೆನಾಡಿನವರು ಸಾವಿರ ಕಿಲೋ ಮೀಟರ್ ವರೆಗೂ ಹೋಗಿ ನನ್ನ ಮಗ ಈ ರೀತಿ ಸಾಯುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ. ನಮಗೆ ದೇವರು ಕೈಹಿಡಿಯಲಿಲ್ಲ. ಇದ್ದ ಬದ್ದ ದೇವರಿಗೆ ಪೂಜೆ ಮಾಡಿದ್ದೇವೆ. ಆದರೆ ದೇವರು ಕೈ ಹಿಡಿಯಲಿಲ್ಲ. ಅವರು ಸೇಫ್ ಆಗಿ ಬರಲಿ ಎಂದು ಬಯಸಿದ್ವಿ. ಆದರೆ ದೇವರು ನನ್ನ ಮಗನ್ನು ಉಳಿಸಲಿಲ್ಲ ಎಂದ ತಾಯಿ ಸಮತಿ ಕಣ್ಣೀರು ಹಾಕಿದ್ದಾರೆ.
UT Khadar visits Manjunatha's house