ಎರಡು ದಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು-Two-day women's cricket tournaments

Suddilive || Shivamogga A.18

ಎರಡು ದಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು-Two-day women's cricket tournaments

Tournament, cricket

ಶಿವಮೊಗ್ಗದ ಕರ್ನಾಟಕ ರಾಜ್ಯ ಕ್ರಿಕೆಟ್ ಮೈದಾನದಲ್ಲಿ ನಾಳೆಯಿಂದ 6 ದಿನಗಳ ವರೆಗೆ 25 ವರ್ಷದ ವಯೋಮಿತಿಯ ಮಹಿಳಾ ಕ್ರಿಕೆಟ್ ಪಂದ್ಯಗಳು ಆರಂಭವಾಗಲಿದೆ. 

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರಪ್ರಥಮವಾಗಿ ಅಂತರ-ವಲಯ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೊರತುಪಡಿಸಿ) 25 ವರ್ಷ ವಯೋಮಿತಿಯ ಮಹಿಳಾ ಕ್ರಿಕೆಟ್ ಪಂದ್ಯಗಳನ್ನು ಶಿವಮೊಗ್ಗ ನಗರದ ಸವಳಂಗ ರಸ್ತೆಯ ನವಿಲೆ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿದೆ.

ದಿನಾಂಕ: 19 ಏಪ್ರಿಲ್ 2025 ರಿಂದ ಪ್ರಾರಂಭವಾಗುವ ಈ ಪಂದ್ಯಗಳು ದಿನಾಂಕ: 25 ಏಪ್ರಿಲ್ 2025 ರವರೆಗೆ ನವಿಲೆ ಕೆ.ಎಸ್.ಸಿ.ಎ. ಎರಡು ಅಂಕಣಗಳಲ್ಲಿ ಹಾಗೂ ಜೆ.ಎನ್.ಎನ್.ಸಿ.ಇ. ಕಾಲೇಜಿನ ಒಂದು ಅಂಕಣದಲ್ಲಿ ನಡೆಯುತ್ತದೆ.

ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು ಪ್ರತಿ ಪಂದ್ಯವು 35 ಓವರ್ ಗಳದ್ದಾಗಿರುತ್ತದೆ. ಒಟ್ಟಾರೆ 15 ಪಂದ್ಯಗಳು ನಡೆಯಲಿದ್ದು ಪ್ರತಿ ಎರಡು ದಿನ ಪಂದ್ಯಗಳ ನಂತರ ಒಂದು ದಿನ ವಿರಾಮ ಇರುತ್ತದೆ. ಪ್ರತಿದಿನ ಬೆಳಿಗ್ಗೆ 9:30 ಗಂಟೆಗೆ ಪಂದ್ಯಗಳು ಪ್ರಾರಂಭವಾಗುತ್ತದೆ.

ಈ ವಿಷಯವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಹೆಚ್ಚಿನ ಪ್ರಚಾರ ನೀಡುವಂತೆ ಹಾಗೂ ಎಲ್ಲಾ ಪಂದ್ಯಗಳ ನಡವಳಿಗಳನ್ನು ಸಹ ಪ್ರಚಾರ ಮಾಡುವಂತೆ ವಿನಂತಿಸುತ್ತೇವೆ.

Two-day women's cricket tournaments

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close