Suddilive || Pehalgaum
ಟೂರಿಗೆ ಹೋದವರು ಭಯೋತ್ಪಾದಕರ ಗುಂಡಿಗೆ ಬಲಿ-Tourists killed by terrorists
ಭಾರತದ ಸ್ವಿಜ್ಡರ್ ಲ್ಯಾಂಡ್ ಎಂದೇ ಪರಿಗಣಿಸಲಾಗುತ್ತಿರುವ ಅನಂತನಾಗ್ ಜಿಲ್ಲೆಗೆ ಟೂರ್ ಹೋಗಿದ್ದ ಶಿವಮೊಗ್ಗದ ನಿವಾಸಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ.
ವಿಜಯನಗರದ ನಿವಾಸಿ ಮಂಜುನಾಥ್ ಕುಟುಂಬದ ಸಮೇತ ಏ.19 ರಂದು ಜಮ್ಮುಕಾಶ್ಮೀರದ ಅನಂತ್ ನಾಗ್ ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದರು. ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್
ಇಂದು ದಿಡೀರ್ ಎಂದು ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮೃತ ಮಂಜುನಾಥ್ ಅವರ ಪತ್ನಿಯವರೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಅವರಿಗೆ 8 ವರ್ಷದ ಮಗನಿದ್ದಾನೆ. ಕುಟುಂಬಕ್ಕೆ ಇವರ ಮೃತ ದೇಹವನ್ನ ಹಸ್ತಾಂತರಿಸಲು ಕೆಲಸಮಯ ತರಗೆದುಕೊಳ್ಳಲಿದೆ.
Tourists killed by terrorists