Suddilive || Shivamogga
ಸಿಡಲಿನಿಂದ ಅಡಿಕೆ ಸುಟ್ಟು ಕರಕಲು-To roast nuts with a fire
ನಿನ್ನೆ ರಾತ್ರಿ ಭೀಕರ ಮಳೆ ಮತ್ತು ಗುಡಗು ಸಿಡಿಲಿನಿಂದ ಮೇಗರವಳ್ಳಿಯ ಮೂಡುವಲ್ಲಿ ರಜತ್ ಹೆಗಡೆ ಅವರ ಮನೆಯಲ್ಲಿ ಅಡಿಕೆ ಗೋಡನಿಗೆ ಸಿಡಿಲು ಬಡೆದು ಅಪಾರ ಪ್ರಮಾಣದ ಅಡಿಕೆ ಸುಟ್ಟು ಕರಗಲಾಗಿದೆ.
ಮನೆಯ ಆವರಣದಲ್ಲಿದ್ದ ಗೋದಾಮಿನಲ್ಲಿ ರಜತ್ ಹೆಗಡೆ ಅವರು 95 ಚೀಲ ಅಂದರೆ ಸರಿ ಸುಮಾರು 50 ಕ್ವಿಂಟಾಲ್ ಅಡಿಕೆ ಇದ್ದು ಅಡಿಕೆ ಸಿಡಿಲಿಗೆ ಆಹುತಿಯಾಗಿದೆ.
ಅವರ ಮನೆಗೆ ಇಂದು ನಾಯಕರ ತಂಡವೇ ಹರಿದು ಬಂದಿತ್ತು. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥ್ ಗೌಡ ಮತ್ತು ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಭೇಟಿ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸುಂದರೇಶ್ ಕೆಸ್ತೂರು ಮಂಜುನಾಥ್ ಬಾಳೆಹಳ್ಳಿ ಪ್ರಭಾಕರ್ ಮೇಗರವಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಮೋದ್ ಹೆಗಡೆ ಮೋಹನ್ ಗೌಡ ಮತ್ತು ಪ್ರಮುಖರು ಉಪಸ್ಥಿತಿ ಇದ್ದರು.
To roast nuts with a fire