ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಸಾರ್ವಜನಿಕರು-Thousands of people gathered

 Suddilive || Shivamogga 

ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಸಾರ್ವಜನಿಕರು-Thousands of people gathered   


ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ಅವರ ಪಾರ್ಥೀವ ಶರೀರ ಅವರ ಮನೆ ವಿಜಯನಗರಕ್ಕೆ ಬಂದಿದ್ದು ಮನೆಯ ಮುಂದೆ ಪಾರ್ಥೀವ ಶರೀರ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ.

ಅವರ ಪಾರ್ಥೂವ ಶರೀರ ವೀಕ್ಷಿಸಲು ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಈ ವೇಳೆ ಜನರುದ್ದೇಶಿಸಿದ ಮಾಜಿ ಡಿಸಿಎಂ ಈಶ್ವರಪ್ಪ ಪಾಕಿಸ್ತಾನಕ್ಕೆಸಿಂಧೂ ನದಿ ನೀರು ಕೊಡಲ್ಲ ಎಂದು ಪ್ರಧಾನಿ ನಿರ್ಧಾರ ಕೈಗೊಂಡಿದ್ದಾರೆ. ನಮ್ಮ ಋಣದಲ್ಲಿ ಪಾಕಿಸ್ತಾನವಿದೆ. ಕೇಂದ್ರದ ತೀರ್ಮಾನ ಸರಿಯಾಗಿದೆ ಎಂದರು. 

ಇಂದು ಶ್ರದ್ದಾಂಜಲಿ ಅರ್ಪಿಸಿ ಇನ್ಮುಂದೆ ರಾಷ್ಟ್ರಭಕ್ತರು ಏನು‌ಮಾಡಲಿದ ಕಾದು ನೋಡಬೇಕಿದೆ. ಅಖಂಡ ಭಾರತ ಆಗುತ್ತೆ. ಇಂದಿಲ ನಾಳೆ ಪಾಕಿಸ್ತಾನ್ ಭೀಪಟದಿಂದ ನಾಶವಾಗಲಿದ್ದು ಅಖಙಡ ಭಾರತವಾಗಲಿದೆ ಎಂದರು.

ಮನೆಯ ಒಳಗೆ ಮಂಜುನಾಥ ಅವರ ಪಾರ್ಥೀವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ಮುಗಿಸಿ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.  

ಹೊಳೆ ಬಸ್ ನಿಲ್ದಾಣದಿಂದ ಪಾರ್ಥೀವ ಶರೀರವನ್ನ ಮಂಜುನಾಥ ಮನೆಯ ತನಕ ಬೈಕ್ ರ‌್ಯಾಲಿ ಮೂಲಕ ತರಲಾಯಿತು.

ಭಯೋತ್ಪದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ದಿಕ್ಕಾರ, ಮುರ್ದಾಬಾದ್ ಮುರ್ದಾಬಾದ್ ಪಾಕಿಸ್ತಾನ್ ಮುರ್ದಾಬಾದ್, ಅಮರ್ ರಹೇ.. ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂಬ ಘೋಷಣೆ ಮಂಜುನಾಥ್ ಅವರ ಮನೆಯ ಮುಂದೆ ಜಮಾವಣೆಗೊಂಡ ಸಾರ್ವಜನಿಕರು ಘೋಷಣೆ ಕೂಗಿದರು. 

Gathered, people

ಎಂಎಲ್ ಸಿ ಡಾ.ಧನಂಜಯ ಸರ್ಜಿ ಕಳೆದ25 ವರ್ಷದಿಂದ  ಶಿವಮೊಗ್ಗದ ಸಾರ್ವಜನಿಕರು ಯೋಧರು 3000  ಜನ ಸಾವನ್ನಪ್ಪಿದ್ದಾರೆ. ಇದನ್ನ ಪ್ರಧಾನಿ ಮೋದಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು. 


ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕಾಶ್ಮೀರದಲ್ಲಿ ಇನ್ನೇನು ಸಾರ್ವಜನಿಕರು ಬದುಕು ಕಟ್ಟಿಕೊಂಡು ಜೀವನ ಮಾಡಲು ಮುಂದಾದಾಗ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಅಟ್ಟಹಾಸ ಮೆರೆದಿದ್ದಾರೆ. ಇದಕ್ಕೆ ತಕ್ಕ ಉತ್ತರ ಪ್ರಧಾನಿ ಮೋದಿ ತೆಗೆದುಕೊಂಡಿದೆ. ಡಿಪ್ಲಮೆಟಿಕ್ ಆಕ್ಷನ್ ನ್ನ ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ಮತ್ತು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲಾಗುವುದು.

ಎಲ್ಲರೂ ಒಟ್ಟಿಗೆ ಈ ಭಯೋತ್ಪಾದನೆಯನ್ನ ಎದುರಿಸೋಣ, ಭಯೋತ್ಪಾದನೆಯ ಇತ್ತೀಚಿನ ದಿನಗಳಲ್ಲಿ ಮಟ್ಟಹಾಕಲು ನಮ್ಮ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ ಎಂದರು


Thousands of people gathered   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close