Suddilive || Shivamogga
ಇದು ಈದ್ಗ ಮೈದಾನವಲ್ಲ, ಸೂಕ್ತ ದಾಖಲಾತಿಯಿಲ್ಲದೆ ಖಾತೆ ಏರಿಸಲಾಗಿದೆ-ರಾಷ್ಟ್ರ ಭಕ್ತರ ಬಳಗ ಆಗ್ರಹ-This is not an Eid ground, the account has been raised without proper documentation - Rashtra Bhakts' Association demands
ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನವನ್ನ ನುಸ್ಲೂಂ ಸಮುದಾಯ ನಮ್ಮ ಈದ್ಗಾ ಮೈದಾನ ಎಂದು ಪ್ರತಿಪಾದಿಸುತ್ತಿರುವುದನ್ಙಖಂಡಿಸಿ ಇಂದು ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದಿದೆ.
ಈ ಜಾಗವನ್ನ ಕಾನೂನುಬಾಹಿರವಾಗಿ ಖಾತೆ ಏರಿಸಲಾಗಿದೆ. ಈ ಜಾಗದಲ್ಲಿ ಪಾರ್ಕ್, ಸ್ಮಶಾನ ಅಥವಾ ಆಟದ ಮೈದಾನವನ್ನಾಗಿ ಬಳಸಿಕೊಳ್ಳಬಹುದೆ ವಿನಃ ಯಾವುದೇ ಬೇರೆ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ ಎಂದು ಬಳಗ ಆಗ್ರಹಿಸಿದೆ.
ಜಾಗವು `ವಕ್ಸ್ ಮಂಡಳಿಗೆ ಸೇರಿದ್ದು ಎನ್ನುವುದಕ್ಕೆ ಸೂಕ್ತ ದಾಖಲೆಗಳಿಲ್ಲದಿದ್ದರೂ ನಿಯಮ ಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ, ಇದಕ್ಕೆ ಸಂಭಂದಿಸಿದಂತೆ ಅಂದಿನ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಭೂಮಾಪಕರು ಸಲ್ಲಿಸಿದ ನಕ್ಷೆಯಲ್ಲಿ ಸದರಿ ಇಲಾಖೆಯ ಮುಖ್ಯಸ್ಥರ ಸಹಿಯೇ ಇಲ್ಲದಿರುವುದನ್ನು ಗುರುತಿಸಿರುತ್ತಾರೆ
ಹಾಗೂ ಸದರಿ ಸ್ಥಳದ ವಿಳಾಸವು ಗೆಜೆಟ್ ನೋಟಿಪಿಕೇಷನ್‌ನಲ್ಲಿ ಇರುವುದಿಲ್ಲ ಹಾಗಾಗಿ ಕೇವಲ ಸ್ಥಳ ತನಿಖೆ ವರದಿ ಮೇರೆಗೆ ಅರ್ಜಿದಾರರ(ವಕ್ಸ್ ಆಸ್ತಿಗಳ ಕಾರ್ಯಪಡೆ) ಕೋರಿಕೆಯನ್ನು ದಾಖಲಿಸುವುದು ಸೂಕ್ತವಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಿವಮೊಗ್ಗ ನಗರದ ಲೋಕಲ್ ಪ್ಲಾನಿಂಗ್ ಏರಿಯ ನಕ್ಷೆಯನ್ನು ಗಮನಿಸಿದಾಗ ಶಿವಮೊಗ್ಗ ಮಹಾನಗರ ಯೋಜನೆ 2031ರ ಪ್ರಕಾರ ಸದರಿ ಜಾಗವು ದಟ್ಟ ಹಸಿರು (ಡಾರ್ಕ್ ಗ್ರೀನ್) ಬಣ್ಣದಿಂದ ಗುರುತಿಸಲ್ಪಟ್ಟಿದ್ದು ಮತ್ತು ಈಗಾಗಲೇ ನಿರ್ಮಿತ ಉದ್ಯಾನ ವೆಂದು ಘೋಷಿತವಾಗಿರುತ್ತದೆ. ಕಾನೂನಿನ ಪ್ರಕಾರ ಈ ಜಾಗವನ್ನು ಉದ್ಯಾನವನ, ಸ್ಮಶಾನ ಹಾಗೂ ಆಟದ ಮೈದಾನವನ್ನಾಗಿ ಉಪಯೋಗಿಸಬಹುದೇ ಹೊರತು ಬೇರೆ ಉದ್ದೇಶಗಳಿಗೆ ಉಪಯೋಗಿಸುವಂತಿಲ್ಲ.
ಇಷ್ಟೆಲ್ಲಾ ತೊಡಕುಗಳಿದ್ದರು ಸಹ ಸದರಿ ಜಾಗದ ಖಾತೆಯನ್ನು ಕಾನೂನಿಗೆ ವಿರುದ್ಧವಾಗಿ ಅಕ್ರಮವೆಸಗಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು ವಕ್ಸ್ ಸ್ವತ್ತು ಎಂದು ದಾಖಲಿಸಿದ್ದು ಈ ಅವ್ಯವಹಾರದಲ್ಲಿ ಬಾಗಿಯಾದ ವ್ಯಕ್ತಿಗಳನ್ನು ಗುರುತಿಸಿ ಕಾನೂನು ರೀತಿ ಶಿಕ್ಷೆಗೊಳಪಡಿಸಲು ಸೂಕ್ತ ತನಿಖೆಯನ್ನು ನಡೆಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
ಹಾಗೂ ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಮಹಾನಗರ ಪಾಲಿಕೆ ಆಯುಕ್ತರು ಬಹಳ ಜವಬ್ದಾರಿಯಿಂದ ಕಾರ್ಯನಿರ್ವಹಿಸಿ ಸೂಕ್ತವಾದ ಮೂಲ ದಾಖಲೆಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಸೇರಬೇಕಾಗಿರುವ ಅಮೂಲ್ಯವಾದ ಅಸ್ತಿಯನ್ನು ಸಂರಕ್ಷಿಸಬೇಕೆಂದು ಈ ಮೂಲಕ ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ.
This is not an Eid ground