ಈದ್ಗಾ ಅಲ್ಲ ಅದು ಆಟದ ಮೈದಾನ, ಡಿಸಿ ಎಸ್ಪಿ ಎಚ್ಚರಿಕೆ ಹೆಜ್ಜೆಯನ್ನಿಡಲಿ-ಈಶ್ವರಪ್ಪ-This is not Eidgah

 Suddilive || Shivamogga

ಈದ್ಗಾ ಅಲ್ಲ ಅದು ಆಟದ ಮೈದಾನ, ಡಿಸಿ ಎಸ್ಪಿ ಎಚ್ಚರಿಕೆ ಹೆಜ್ಜೆಯನ್ನಿಡಲಿ-ಈಶ್ವರಪ್ಪ-This is not Eidgah  it is a playground, DC SP should take precautionary measures - Eshwarpa

ಡಿಸಿ ಕಚೇರಿ ಎದಿರಿನದ್ದು ಈದ್ಗಾ ಮೈದಾನವಲ್ಲ, ಆಟದ ಮೈದಾನವದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಇದರಿಂದ ಮೈದಾನದ ಕುರಿತಂತೆ ವಿವಿಧ ಹೇಳಿಕೆಗಳು ಹೊರಬೀಳುತ್ತಿವೆ. 

ಡಿಸಿ, ಎಸ್ಪಿ, ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ, ಯೋಚನೆ ಮಾಡಿ ಹೆಜ್ಜೆ ಇಡಬೇಕು ಎಂದು ಆಗ್ರಹಿಸಿರುವ ಮಾಜಿ ಡಿಸಿಎಂ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಪ್ರಕಾರ ಪಾರ್ಕ್, ತೆರೆದ ಜಾಗ, ಬಿಜಿ ಮತ್ತು ಆಟದ ಮೈದಾನ ಆಗಬೇಕು. ಅದನ್ನು ಬಿಟ್ಟು ಬೇರೆಯದ್ದಕ್ಕೆ ಕೊಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. 

ತುರ್ತಾಗಿ ಅಲ್ಲಿಂದ ತೆರವುಗೊಳಿಸಬೇಕು. ಮಹಾವೀರ ವೃತ್ತದಲ್ಲಿರುವ ದರ್ಗಾದ ಒಳಗಡೆ ಈದ್ಗಾ ಮೈದಾನ ೩೬ ಗುಂಟೆ ಇದೆ. ಅದನ್ನು ವಿಸ್ತರಿಸಲು ಹೊರಟಿದ್ದಾರೆ. ಪಾಲಿಕೆ ಆಯುಕ್ತರೇ ಡಿಸಿಗೆ ಪತ್ರ ಬರೆದಿದ್ದಾರೆ. ನಕ್ಷೆಯಲ್ಲಿ ಭೂಮಾಪಕರ ಸಹಿ ಇದೆ. ಆದರೆ ಇಲಾಖೆಯ ಮುಖ್ಯಸ್ಥರ ಸಹಿಯೇ ಇಲ್ಲ ಎಂದು ತಿಳಿಸಿದ್ದಾರೆ. ಸಹಿ ಇಲ್ಲದಿದ್ದರೆ ಕಸದ ಪುಟ್ಟಿಗೆ ಎಸೆಯಬೇಕು ಎಂದು ಹೇಳಿದರು. 

ಖಾತೆ ಆಗಿದೆ ಎನ್ನುವುದು ಕಾನೂನು ಬಾಹೀರವಾಗಿದೆ. ಖಾತೆ ಆಗಿರುವುದೇ ಕಾನೂನು ಬಾಹಿರವಾಗಿದೆ.‌ ಗುಮಾಸ್ತ ಸಹಿ ಮಾಡಿಕೊಟ್ಟರೂ ಖಾತೆ ಆಗುತ್ತದಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ. ಡಿಸಿ ಇದನ್ನು ಶಾಂತವಾಗಿ ಪರಿಶೀಲಿಸಬೇಕು. ಮುಸ್ಲಿಂ ನಾಯಕರು ತಮ್ಮದೇ ಆಸ್ತಿ ಎಂದು ಬೇಲಿ ಹಾಕಿದ್ದಾರೆ. ಎಸ್ಪಿ ಎಡವಿದ್ದಾರೆ. ರೈಲ್ವೆ ಹಳಿ ಬಳಸಿ ಬೇಲಿ ಹಾಕಿದವರನ್ನು ಪತ್ತೆ ಮಾಡಿ ಬಂಧಿಸಬೇಕು. ಕಾನೂನು ಕ್ರಮ‌ ಕೈಗೊಳ್ಳಬೇಕು ಎಂದು ಈಶ್ವರಪ್ಪ ಗುಡುಗಿದ್ದಾರೆ. 

ಕಾನೂನುಬದ್ಧವಾಗಿ ಖಾತೆಯಾಗಿಲ್ಲ. ಈದ್ಗಾ ಮೈದಾನವೆಂದು ಇನ್ಮುಂದೆ ಕರೆಯಬಾರದು. ಆಟದ ಮೈದಾನವೇ ಎಂದು ಕರೆಯಬೇಕು. ನಮಾಜ್ ಮಾಡುವ‌ ಸ್ಥಳ ಅದಲ್ಲ. ಕಾನೂನು ರೀತಿಯಾಗಿ ತೆರವುಗೊಳಿಸಬೇಕು.ಏ.೫ರಂದು ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಪ್ಪ ಗುಡುಗಿದರು. 

ಖಾತೆ ಮಾಡಿಕೊಟ್ಟ ಅಧಿಕಾರಿ ಬಗ್ಗೆ ಕ್ರಮ ಕೈಗೊಳ್ಳಬೇಕು. ೨೦೧೯ರವರೆಗೆ ಖಾತೆ ಇರಲಿಲ್ಲ. ಈಗ ಆಗಿರುವ ಖಾತೆಯೂ ಕಾನೂನು ಬಾಹೀರವಾಗಿದೆ. ಗೆಜೆಟ್ ನೋಟಿಫಿಕೇಶನ್ ಗೆ ಅಪ್ಪ ಅಮ್ಮ ಇಲ್ಲ. ವಿಳಾಸವಿಲ್ಲ. ಈದ್ಗಾ ಸುನ್ನಿ ಎಂದಷ್ಟೆ ಇದೆ. ವಿಧಾನಸೌಧವನ್ನೇ ಬಿಡುತ್ತಿಲ್ಲ. ಇನ್ನು ಡಿಸಿ ಆಫೀಸ್ ಬಿಡುತ್ತಾರಾ ? ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಲ್ಲಿ ಕೆಲವರು ಓಡಾಡಿದ್ದಾರೆ. ಪ್ಲ್ಯಾನಿಂಗ್ ಪ್ರಕಾರ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಇನ್ನೂ ಸಾಕಷ್ಟು ದಾಖಲೆಗಳು ಇದಾವೆ ಎಂದು ಈಶ್ವರಪ್ಪ ಹೇಳುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. 

This is not Eidgah

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close