Suddilive || Shivamogga
ಕುಟುಂಬಸ್ಥರ ಸ್ವಂತ ಖರ್ಚಿನಲ್ಲಿ ಬಂಗಾರಪ್ಪನವರ ಹುಟ್ಟೂರಿನಲ್ಲಿ ದೇವಸ್ಥಾನ-ಮಧು ಬಂಗಾರಪ್ಪ-Temple in Bangarappa's hometown at the family's own expense - Madhu Bangarappa
ಅಡುಗೆ ಮನೆ, ಕೊಠಡಿಗೆ ಹಣವಿದೆ ಕಾಂಪೌಂಡ್ ಗೆ ಹಣವಿಲ್ಲ.ಹೀಗೆ ಶಾಲೆಗಳ ಕಾಂಪೌಂಡ್ ಹಾಕುವ ಮೂಲಕ ಆಸ್ತಿಯನ್ನ ಸೃಷ್ಠಿಸಿದಂತಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲೆಯ ಸೊರಬ ತಾಲೂಕಿನ ಹುರುಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲಾ ಕಾಂಪೌಂಡ್ ಮತ್ತು ಎನ್ ಆರ್ ಐಜಿಯ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಶಾಲೆಯ ಕಾಂಪೌಂಡ್ ಗೆ ಹಣ ಸಿಗಲ್ಲ. ನರೇಗಾ ಮೂಲಕ ನಿರ್ಮಿಸಲಾಗಿದೆ. ಒಂದು ಎಕರೆಯಿಂದ ನೂರಾರು ಎಕರೆಯ ಕೆರೆ ಹೆಚ್ಚಾಗಿ ಸೊರಬ ತಾಲೂಕಿನಲ್ಲಿದೆ. ಆಗ ಜೆಡಿಎಸ್ ನಲ್ಲಿದ್ದಾಗ ಮಾವಲಿ ಕೆರೆಯ ಹೂಳೆತ್ತಿದ ಘಟನೆಯನ್ನ ನಿರ್ಮಿಸಿರುವ ಬಗ್ಗೆ ವಿವರಿಸಿದರು.
ಸರ್ಕಾರಿ, ಖಾಸಗಿ ಶಾಲೆ 70 ಸಾವಿರ ಶಾಲೆಯಿದೆ 1 ಕೋಟಿಗೂ ಹೆಚ್ಚು ಶಾಲಾ ಮಕ್ಕಳಿದ್ದಾರೆ. ಸರ್ಕಾರದಿಂದ ವಾರಕ್ಕೆ ಎರಡು ದಿನಕ್ಕೆ ಮೊಟ್ಟೆ ಕೊಡಲಾಗುತ್ತಿದೆ. 57 ಲಕ್ಷ ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡಲಾಗುತ್ತಿದೆ. ಅಜೀಜ್ ಪ್ರೇಮ್ ಜೀ ಜೊತೆ ನೀಡಲಾಗುತ್ತಿದೆ. ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಶಾಲೆಗೆ ಎರಡು ಕೋಠಡಿ ಸ್ಯಾಂಕ್ಷನ್
ಹುರುಳಿ ಶಾಲೆಗೆ ಎರಡು ಕೋಠಡಿಯನ್ನವೇದಿಕೆ ಮೇಲೆ ಸ್ಯಾಂಕ್ಷನ್ ಮಾಡಿದ ಸಚಿವರು. ಶಾಲೆ ಮಕ್ಕಳು ಹೆಚ್ಚಾಗಿ ಬರುವಂತೆ ಶಾಲೆ ಆಡಳಿತ ಎಸ್ ಡಿ ಎಂಸಿಗೆ ತಿಳಿಸಿದರು. ಗೃಹಲಕ್ಷ್ಮಿ ಗೃಹಜ್ಯೋತಿ ಶಕ್ತಿ, ಯುವನಿಧಿಯಂತಹ ಗ್ಯಾರೆಂಟಿ ನೀಡಲಾಗುತ್ತಿದೆ.
ಪ್ರಗತಿ ಸ್ಟಾರ್ಟ್ ಆಗಿದೆ.
ಪ್ರಗತಿ ಸ್ಟಾರ್ಟ್ ಆಗಿದೆ. ಹಿಂದಿನ ಸರ್ಕಾರ ಬಜೆಟ್ ತೆಗೆದಿಡದೆ ಯೋಜನೆ ರೂಪಿಸಿತ್ತು. ಎರಡು ವರ್ಷ ಪ್ರಗತಿ ಕಾಣಲಿಲ್ಲ. ಉಳಿದ ಎರಡು ವರದಷದ ಒಳಗೆ ಖಡಕ್ ಅಭಿವೃದ್ಧಿ ಮಾಡಿ ನುಡಿದಂತೆ ನಡೆಯುತ್ತೇವೆ. ಮಕ್ಕಳನ್ನ ಶಾಲೆಗೆ ಸೇರಿಸುವುದಷ್ಟೆ ಜವಬ್ದಾರಿಯಲ್ಲ. ನಿರಂತರವಾಗಿ ಶಾಲೆಗೆ ಕಳುಹಿಸಬೇಕು. ಆಗ ಪೋಷಕರ ಜವಬ್ದಾರಿ ಮೆರೆಯದಂತಾಗುತ್ತದೆ ಎಂದರು.
ಗುಡವಿನಕೊಪ್ಪದಲ್ಲಿ ದೇವಸ್ಥಾನ
ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಹುಟ್ಟೂರಾದ ತಾಲೂಕಿನ ಗುಡುವಿನ ಕೊಪ್ಪದಲ್ಲಿ ಸ್ವಂತ ಖರ್ಚಿನಲ್ಲಿ ರಾಮಲಿಂಗೇಶ್ವರ ದೇವಸ್ಥಾನವನ್ನ ನಿರ್ಮಿಸಲು ಯೋಜಿಸಲಾಗಿದೆ ಎಂದರು.
Temple in Bangarappa's hometown