Suddilive || Shivamogga
ನಾಳೆ ಅಮಾವಾಸ್ಯೆ ಪ್ರಯುಕ್ತ ಪುಣ್ಯ ತೀರ್ಥ ಸ್ನಾನ -Taking a holy dip in the holy water of the holy temple tomorrow on the occasion of Amavasya
ಶಿವಮೊಗ್ಗ ಹೊಳೆಹೊನ್ನೂರು ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಪಿಳ್ಳನಗಿರಿ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಶ್ರೀಹನುಮಂತ ದೇವರ ಸನ್ನಿಧಿಯಲ್ಲಿ ಪುಣ್ಯ ತೀರ್ಥಸ್ನಾನ ನಡೆಯಲಿದೆ.
ಪ್ರತಿ ತಿಂಗಳ ಅಮಾವಾಸ್ಯೆಯಂದು ಶ್ರೀಹನುಮಂತ ದೇವರಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ ನೆರವೇರಲಿದ್ದು ಮಹಾ ಮಂಗಳಾರತಿ ಪೂಜೆ ನಂತರ ಭಕ್ತರಿಗೆ ಹನುಮಂತ ದೇವರಿಗೆ ಅಭಿಷೇಕ ಮಾಡಿದ ಪವಿತ್ರ ತೀರ್ಥ ಸ್ನಾನ ಮಾಡಿಸಲಿದ್ದಾರೆ.
ಪುಣ್ಯ ತೀರ್ಥಸ್ನಾನ ಮಾಡುವುದರಿಂದ ಶನಿ ಪ್ರಭಾವ ಸೇರಿದಂತೆ ದುಷ್ಟಶಕ್ತಿಗಳ ಕಾಟ ದೂರವಾಗಲಿದೆ ಎಂದು ನಂಬಿಕೆ ಇದೆ. ಸಧ್ಭಕ್ತರು ನಾಳೆ ನಡೆಯುವ ಪುಣ್ಯ ತೀರ್ಥಸ್ನಾನದಲ್ಲಿ ಭಾಗವಹಿಸಿ ಹನುಮಂತ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅರ್ಚಕ ಮಿಥುನ್ ಅಯ್ಯಂಗಾರ್ ತಿಳಿಸಿದ್ದಾರೆ.
ನಾಳೆ ಅಮಾವಾಸ್ಯೆ ಪ್ರಯುಕ್ತ ಆಂಜನೇಯನ ಸ್ವಾಮಿ ಗೆ ಸಾಮೂಹಿಕ ಪಂಚಾಮೃತ ಅಭಿಷೇಕ ಇದ್ದು ಸೇವಾ ಶುಲ್ಕ 250 ರೂ ಇದ್ದು ಸೇವೆಗೆ ಕೊಡುವವರು ನಿಮ್ಮ ಹೆಸರು ನಕ್ಷತ್ರ ಗೋತ್ರ ರಾಶಿ ಹಾಗೂ ನಿಮ್ಮ ಮನೆ ವಿಳಾಸ ದೊಂದಿಗೆ 9902719492 ಈ no ph ಮಾಡುವ ಮೂಲಕ ವಿವರಗಳನ್ನು ಕಳಿಸಬೇಕೆಂದು ಕೋರಲಾಗಿದೆ.
Taking a holy dip