Suddilive || Sagara
ಯಾರದ್ದೋ ನೋಟೀಸ್ ಎಲ್ಲಮ್ಮನ ಜಾತ್ರೆ...!Someone's notice, Ellamma's Jathre
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಡವಟ್ಟಿನಿಂದ ಯಾರಿಗೂ ಕಳುಹಿಸಬೇಕಾದ ನೋಟಿಸ್ ಪ್ರತಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳ ರವರಿಗೆ ನೀಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ.
ಯಾವುದೇ ಮಾಹಿತಿ ಇಲ್ಲದೆ ಯಾವುದೇ ಅರಿವು ಇಲ್ಲದೆ ಯಾರಿಗೋ ಕಳಿಸಬೇಕಾದ ನೋಟಿಸ್ ಪ್ರತಿಯನ್ನು ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ರವರ ವಿಳಾಸಕ್ಕೆ ಕಳುಹಿಸಿಕೊಡುವ ಮೂಲಕ ಮುಂದಿನ ಕ್ರಮದ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ರೈತ ಸಂಘದ ವತಿಯಿಂದ ಸಾಗರದ ಕೋರ್ಟ್ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿಗೆ ವಾಲಗ್ ದ ಜೊತೆಗೆ ಹಣ್ಣು ಹಂಪಳ , ಅಡಿಕೆ ಎಲೆ ತೆಗೆದುಕೊಂಡು ಬಂದು ಅಧಿಕಾರಿಗಳಿಗೆ ಮಾಹಿತಿ ಕೇಳಿದರು.
ಈ ಸಂದರ್ಭದಲ್ಲಿ ದಿನೇಶ್ ಶಿರವಾಳ ಜೊತೆ ಮೊಬೈಲ್ ಕರೆಯ ಮೂಲಕ ಮಾತನಾಡಿದ ಅಧಿಕಾರಿ “ಏನೋ ತಪ್ಪಾಗಿದೆ ಸರಿ ಮಾಡಿಕೊಳ್ಳುತ್ತೇವೆ ನೀವು ಟೆಂಪ್ಟ್ ಆಗಬೇಡಿ” ಎಂದು ಹೇಳುವ ಮೂಲಕ ಉಡಾಫೆ ಉತ್ತರ ನೀಡುವ ಘಟನೆ ಕೂಡ ನಡೆಯಿತು.
ನಂತರ ಸುದ್ದಿಲೈವ್ ನೊಂದಿಗೆ ಮಾತನಾಡಿದ ದಿನೇಶ್ ಶಿರವಾಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Someone's notice, Ellamma's Jathre