ರಾಬರ್ಟ್ ವಾದ್ರರಿಗೆ ಗುಂಡಿಕ್ಕಿ-ಶಾಸಕ ಚೆನ್ನಬಸಪ್ಪ-Shoot Robert Vadra-MLA Chennabasappa

 Suddilive || Shivamogga

ರಾಬರ್ಟ್ ವಾದ್ರರಿಗೆ ಗುಂಡಿಕ್ಕಿ-ಶಾಸಕ ಚೆನ್ನಬಸಪ್ಪ-Shoot Robert Vadra-MLA Chennabasappa     

Shoot, Robert vadra

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ ರಾವ್ ಅವರ ಅಂತ್ಯಕ್ರಿಯೆ ರೋಟರಿ ಚಿತಾಗಾರದಲ್ಲಿ ನಡೆದಿದೆ. ನಿನ್ನೆ ಮಂಜುನಾಥ ಅವರ ಶೋಭಾಯಾತ್ರೆಗೆ ಶಿವಮೊಗ್ಗದ ವರ್ತಕರು ಅರ್ಧದಿನ ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಕ್ ಬಾಂಬ್ ಹಾಕಿ ಭಾರತ ಮಾತೆಗೆ ಹೂವು ಹಾಕಿ ಎಂಬ ಘೋಷಣೆ ಘೋಷಣೆಯಾಗಿ ಉಳಿಯಬಾರದು. ಊ ಬಗ್ಗೆ ಕಾರ್ಯಪ್ರವರ್ತರಾಗಿ ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿಕೊಳ್ಳುವೆ ಎಂದರು. 

ಸಾಮಾನ್ಯ ಪ್ರಜೆಯಾಗಿರುವ ರಾಬರ್ಟ್ ವಾದ್ರ ಉಗ್ರಗಾಮಿಗಳಿಗೆ ಶಕ್ತಿ ನೀಡುವ ಹೇಳಿಕೆ ನೀಡಿದ್ದಾರೆ. 26 ಜನ ಸಾಯಿಸುವ ಹೇಳಿಕೆ ನೀಡಿರುವುದಕ್ಕೆ ಅವರನ್ನ ಗುಂಡುಕ್ಕಿ ಇಲ್ಲ ಅವರನ್ನ ಬಂಧಿಸಬೇಕು. ಉಗ್ರರ ವಾದ್ರರಿಗೆ ನರಮೇದದ ಬಗ್ಗೆ ಅರಿವಿಗೆ ಬಂದಿಲ್ಲದಿರುವುದು ದುರಂತವಾಗಿದೆ ಎಂದರು. 

ರಾಬರ್ಟ್ ವಾದ್ರ ಈ ದೇಶದಲ್ಲಿ ಬದುಕಲು ನಾಲಾಯಕ್ ಎಂದ ಶಾಸಕರು, ಬೊಮ್ಮನ್ ಕಟ್ಟೆಯ ವ್ಯಕ್ತಿಯೊಬ್ಬ ಹುಚ್ಚ ಎಂದು ಕರೆಯುತ್ತಾರೆ. ಅವನು ಬಂದು ಮಂಜುನಾಥರಿಗೆ ಪುಷ್ಪನಮನ ಮಾಡಿಹೋಗಿದ್ದಾನೆ. ಆತನಿಗೂ ಧನ್ಯವಾದ ತಿಳಿಸುವೆ ಎಂದರು. 

ಕಾಶ್ಮೀರದಲ್ಲಿ ನರಮೇದ ಇಂದು ನಿನ್ನೆಯದಲ್ಲ. ಜಿಹಾದಿಗಾಗಿ ಬದುಕುವ ಭಯೋತ್ಪಾದಕರು ಅವರು. ಭಯೋತ್ಪಾದಕತೆ ನಡೆಸಿ ಸ್ವರ್ಗಕ್ಕೆ ಹೋಗುವುದು ಅವರ ಮೆಂಟಾಲಿಟಿ. ಮೊದಲು ಬಲಿಹಾಕಬೇಕಾದ್ದು ಪಾಕಿಸ್ತಾನವನ್ನ. ಭಾರತೀಯರು ಬಿಟ್ಟುಕೊಟ್ಟ ಪಾಕ್ ಅದು. ದಾನ ಪಡೆಯುವರಿಗೆ ಅಷ್ಟು ಇದೆ ಎಂದಾದರೆ ದಾನಕೊಟ್ಟವರಿಗೆ ಎಷ್ಟಿರಬೇಡ ಎಂದು ಪ್ರಶ್ನಿಸಿದರು. 

ನೆಹರೂ ಅವರು ಮಾಡಿದ ದೊಡ್ಡ ಶಿಮ್ಲಾ ಒಪ್ಪಂದ ಪಾಕ್ ನಲ್ಲಿರುವ ಹಿಂದೂಗಳಿಗೆ ಪಾಕ್ ಸರ್ಕಾರ ರಕ್ಷಣೆ ಬೀಡಬೇಕು. ಭಾರತದ ಮುಸ್ಲೀಂರಿಗೆ ನಾವು ರಕ್ಷಣೆ ನೀಡುವುದಾಗಿ ಮಾಡಿಕೊಂಡ ಒಪ್ಪಂದವದು. ಪಾಕ್ ಹಿಂದೂಗಳು ಎಂತಹ ಸ್ಥಿತಿಗೆ ತಲುಪಿದ್ದಾರೆ. ಭಾರತದ ಮುಸ್ಲೀಂ ಹೇಗಿದ್ದಾರೆ ತಾಳೆ ಹಾಕಿ ನೋಡಬೇಕು‌ ಎಂದರು. 

ಭಾರತದಲ್ಲಿ ನಾವು ಅಲ್ಪಸಂಖ್ಯಾತರೊಂದಿಗೆ ಇದ್ದೇವೆ ಎಂದು ಕಾಂಗ್ರೆಸ್ ಪರೋಕ್ಷವಾಗಿ ಹೇಳಿದೆ. ಇದು ಪ್ರಜಾಪ್ರಭುತ್ವಕ್ಕೆ ಹೇಳಿ ಮಾಡಿದ ದ್ರೋಹ. 2000 ದಲ್ಲಿ ಉಗ್ರರು ಸೇರಿ 4 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. 2002 ರಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. 2000 ದಿಂದ 2025 ರವರೆಗೆ 47800 ಜನ ಹತರಾಗಿದ್ದಾರೆ. 24324 ಘಟನೆ ನಡೆದಿದೆ 14515 ಜನ ಸಾಮಾನ್ಯರು ಸತ್ತರೆ,  24497 ಭಯೋತ್ಪಾದಕರು ಸತ್ತಿದ್ದಾರೆ, 7578 ನಮ್ಮ ಸೈನಿಕರು ಸತ್ತಿದ್ದಾರೆ ಎಂದರು. 

ಗಾಂಧೀಜಿ ಹತ್ಯೆಯಾದಾಗ ಇವತ್ತಿಗೂ ನಾತೂರಾಮ್ ಗೋಡ್ಸೆ ಬಗ್ಗೆ ಮಾತನಾಡುತ್ತೀರಿ. ಖಲಿಸ್ತಾನ್ ವಾದಿಗಳು ಇಂದಿರಾಗಾಂಧಿಯನ್ನ ತೆಗೆದರು. ರಾಜೀವ್ ಗಾಂಧಿಯನ್ನ ಹತ್ಯೆ ಮಾಡಿದರು? ಅವರೆಲ್ಲಾ ಹೋರಾಟಗಾರರು ಎಂದು ಬಿಂಬಿಸಲಾಯಿತು. ನೀವು ಸೆಟ್ ಮಾಡುವ ನರೆಟಿವ್ ಬಗ್ಗೆ ಜನ ಬೇಸತ್ತಿದ್ದಾರೆ. ನಿಮಗೆ ಗೊತ್ತು ಕ್ರೈಂ ಘಟನೆಗಳು ಹೇಗೆ ನಡೆಯುತ್ತವೆ ಎಂದು ಪ್ರಶ್ನಿಸಿದರು. ವಾದ್ರರಿಗೆ ಕಪಾಳಮೋಕ್ಷ ಮಾಡದೆ ಕಾಂಗ್ರೆಸ್ ಸುಮ್ಮನಿರುವುದು ಯಾಕೆ ಎಂದು ಪ್ರಶ್ನಿಸಿದರು. 

ಭಾರತದ ತಾಕತ್ತು ಜಗತ್ತಿಗೆ ಗೊತ್ತು. ಪ್ರಧಾನಿಯವರು ಪಾಕ್ ಗೆ ಮತ್ತು ಭಯೋತ್ಪಾದಕರಿಗೆ ಏನು ಮಾಡುದನ್ನ ತಿಳಿಸಿದ್ದಾರೆ ಅದನ್ನ ಮಾಡುತ್ತಾರೆ. ಭಾರತ ತೆಗೆದುಕೊಂಡ ನಿರ್ಣಯಗಳನ್ನ ವಿಶ್ವವೇ ಮೆಚ್ಚಿಕೊಂಡಿದೆ. ವಾಯು ಮಾರ್ಗ, ಪಾಕ್ ಮಾಧ್ಯಮ‌ ನಿಷೇಧ, ಟ್ವಿಟರ್ ಖಾತೆ ಬಂದ್ ಆಗಿದೆ. ದೇಶದ ಜನ ಭಯಪಡುವ ಅವಶ್ಯಕತೆಯಿಲ್ಲ. ಪಾಕ್ ನ್ನ ಸರ್ವನಾಶ ಮಾಡುತ್ತೇವೆ ಎಂದು ಗುಡುಗಿದರು. 

ಹಿಂದೂಗಳನ್ನ ಟಾರ್ಗೆಟ್ ಮಾಡಲಾಗಿದೆ. ನೆಹರೂ ಅವರ ಕಾಲದಲ್ಲೂ ಟಾರ್ಗೆಟ್ ಹಿಂದೂಗಳೆ, ಇವತ್ತೂ ಹಿಂದೂಗಳೆ ಟಾರ್ಗೆಟ್ ಆಗಿದೆ. ಇಂದು ಮಾತ್ರ ಹಿಂದೂಗಳನ್ನ‌ಟಾರ್ಗೆಟ್ ಮಾಡುತ್ತಿರುವ ನರೆಟಿವ್ ಬಿಲ್ಡ್ ಮಾಡಲಾಗುತ್ತಿದೆ. ಪಾಕ್ ನಲ್ಲಿ ಶಿಯಾಗಳ ಮತ್ತು ಹಿಂದೂಗಳ ಪರಿಸ್ಥಿತಿ ಏನಾಗಿದೆ.  ಭದ್ರತಾ ವೈಫಲ್ಯ ಎಂದು ಹೇಳುವ ಮೂಲಕ ಪ್ರಕರಣವನ್‌ನ ತಿರುಗಿಸಬೇಡಿ.‌ಅಖಂಡ ಭಾರತದ  ಕಲ್ಪನೆಗೆ ಮುನ್ನುಡಿ ಎಂದರೆ ತಪ್ಪಾಗಲಾಗದು. 

ಅನೇಕ ಸಂಘಟನೆಗಳನ್ನ ನಿಷೇಧಿಸಲಾಗಿದೆ. ಹೆಸರು ಬದಲಾಯಿಸಿಕೊಂಡು ಅವರೆಲ್ಲಾ ಬದುಕುತ್ತಿದ್ದಾರೆ. ಟಿಪ್ಪು ನಗರದಲ್ಲಿ ಹಿಂದೂಗಳ‌ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಸರ್ವೇಜನ ಸುಖಿನೋ ಭವಂತು ಎನ್ನುವ ಹಿಂದುತ್ವ ಇದು. ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ, ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಬಗ್ಗೆ ಕಾಂಗ್ರೆಸ್ ವೈಫಲ್ಯವಲ್ಲವಾ ಇದು ಎಂದು ಪ್ರಶ್ನಿಸಿದರು. 

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಮಟ್ಟಹಾಕ ಬೇಕು ಎನ್ನುವ ಸಿದ್ದರಾಮಯ್ಯ ಕರ್ನಾಟಕದಲ್ಲಿ ನಡೆಯುತ್ತಿರುವುದೇನು? ಯಾರ ಅಡ್ಡಬಂದರೂ ಪಾಕ್ ಗೆ ಸರಿಯಾದ ಕೆಲಸವನ್ನ ಮೋದಿ ಮಾಡಲಿದ್ದಾರೆ. ನಿಮ್ಮ‌ಪಾಪದ ಕೂಸು ತಿಂಬಿದೆ ಈಗಲಾದರೂ ಬದಲಾಗಿ ಎಂದು ಸಿಎಂಗೆ ಕಿವಿ ಮಾತನ್ನ ಹೇಳಿದರು. 

ಭಾರತ್ ಜೋಡೋ ಎಂದ ಕಾಂಗ್ರೆಸ್ ದುಷ್ಕರ್ಮಿಹಳಿಗೆ ಉಗ್ರರಿಗೆ ಕುಮ್ಮಕ್ಕು ಕೊಡುವ ಹೇಳಿಕೆ ಕೊಡುತ್ತೀರಿ. ಪಾಕ್ ನಲ್ಲಿ ಇರುವ ದುಸ್ಥಿತಿಯನ್ನ ಮಾಡುವ ಕೆಲಸ ಮಾಡುತ್ತಿದ್ದೀರಿ ಎಂದು ಗುಡುಗಿದ ಅವರು, ಬೇಗಾನೆ ರಾಮಯ್ಯನವರ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಜಿಲ್ಲಾ ಅಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಸೂಡಾ ಅಧ್ಯಕ್ಷರಾದ ಜ್ಞಾನೇಶ್, ನಾಗರಾಜ್ ಮಂಜುನಾಥ್ ನವುಲೆ ಸುದ್ದಿಗೋಷ್ಠಿಯಲ್ಲಿ ಉಪ್ಥಿತರಿದ್ದರು. 

Shoot Robert Vadra-MLA Chennabasappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close