ಭಾನುಪ್ರಕಾಶ್ ಶರ್ಮ ಅವರನ್ನ ಮಹಾಸಭದ ಅಧ್ಯಕ್ಷರನ್ನಾಗಿ ಮಾಡುವಂತೆ ಭಾಗವತ್ ಮನವಿ- Sharma to be made the president of the Mahasabha

 Suddilive || Shivamogga

 ಭಾನುಪ್ರಕಾಶ್ ಶರ್ಮ ಅವರನ್ನ ಮಹಾಸಭದ ಅಧ್ಯಕ್ಷರನ್ನಾಗಿ ಮಾಡುವಂತೆ ಭಾಗವತ್ ಮನವಿ-Bhagwat requests Bhanuprakash Sharma to be made the president of the Mahasabha

Mahasabha, election


ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಏ.13 ರಂದು ಮತದಾನ ನಡೆಯಲಿದ್ದು ಈ ಕುರಿತು ಜಿಲ್ಲಾ ಬ್ರಾಹ್ಮಣ ಮಹಸಭಾ ಅಧ್ಯಕ್ಷ ನಟರಾಜ ಭಾಗವತ್ ಸುದ್ದಿಗೋಷ್ಠಿ ನಡೆಸಿ ಮಹಾಸಭದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭಾನುಪ್ರಕಾಶ್ ಶರ್ಮ ಮತ್ತು ಅವರ ಪರವಾಗಿ ಸ್ಪರ್ಧಿಸುತ್ತಿರುವ ಟಿ.ಎಲ್ ತಿಮ್ಮಪ್ಪ ಹೆಗಡೆಯ ಪರ ಮತಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.

ಭಾನುಪ್ರಕಾಶ್ ಶರ್ಮ ಕಳೆದ 30 ವರ್ಷಗಳಿಂದ ಮಹಾಸಭಾದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಶೋಕ ಹಾರನಹಳ್ಳಿಯವರ ಮಾರ್ಗದರ್ಶನದಲ್ಲಿ ಮೂರು ವರ್ಷ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಸನಾತನಧರ್ಮದ ಉಳಿವಿಗಾಗಿ ಹಲವು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಹೆಚ್ ಪಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. 

14 ವರ್ಷಗಳ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. 1995 ರಲ್ಲಿ ಶ್ರೀರಂಗಪಟ್ಟಣದಲ್ಲಿ ಅತಿರುದ್ರ ಮಹಾಯಾಗ, ವಿಹೆಚ್ ಪಿಯ ಮಂಡ್ಯ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಭಾರತದ ಪುರೋಹಿತ ಸಂಘದ ಉಪಾಧ್ಯಕ್ಷರಾಗಿದ್ದಾರೆ.  ಇವರನ್ನ ಗೆಲ್ಲಿಸುವಂತೆ ಕೋರಿದರು. 

ಭಾನುಪ್ರಕಾಶ್ ಅವರ ಶಿವಮೊಗ್ಗ ಜಿಲ್ಲಾ ಪ್ರತಿನಿಧಿಯಾಗಿ ಎಲ್ ಟಿ ತಿಮ್ಮಪ್ಪ ಹೆಗಡೆ ಸ್ಪರ್ಧಿಸುತ್ತಿದ್ದು ಇವರು ಸಹ ಹಲವು ಸೇವಾ ಸಮಿತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರನ್ನೂ ಗೆಲ್ಲಿಸುವಂತೆ ಕೋರಿದರು.

Sharma to be made the president of the Mahasabha



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close