Suddilive || Shikaripura
ಸರ್ವೋತ್ತಮ ಪ್ರಶಸ್ತಿ ಇವರು ಅರ್ಹರೆ?Does this person deserve for the Sarvottam awards?
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್ ಗೆ ಕೆಲ ಸಂಘಟನೆಗಳ ಶಿಫಾರಸ್ಸು ಮೇರೆಗೆ ರಾಜ್ಯ ಸರ್ಕಾರ ನೀಡುವ ರಾಜ್ಯ ಸರ್ವೋತ್ತಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದ್ದು, ಇವರ ವಿದುದ್ಧ ಕೆಲ ಆರೋಪಗಳು ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಪ್ರಶಸ್ತಿಯ ಮರು ಪರಿಶೀಲನೆಗೆ ಆಗ್ರಹಿಸಲಾಗಿದೆ.
ಶಿಕಾರಿಪುರ ತಾಲೂಕಿನಲ್ಲಿ ಕಳೆದ ಮೂರ ವರ್ಷಗಳಿಂದ ಬಿಸಿಎಂ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಅವರು ತಮ್ಮ ಇಲಾಖೆ ಹೆಸರನ್ನು ಸಂಪೂರ್ಣ ಅವನತ್ತಿಗೆ ತಂದಿರುವ ಆರೋಪ ಕೇಳಿ ಬಂದಿದೆ.
ಅನೈತಿಕ ಚಟುವಟಿಗೆ ಹಾಸ್ಟೆಲ್ ಬಳಕೆ?
ಅನೈತಿಕ ಚಟುವಟಿಕೆ ತಾಣವಾಗಿ ಹಾಸ್ಟೆಲ್ ದುರ್ಬಳಕೆ ಗಮನಕ್ಕೆ ಬಂದರು ಕ್ರಮ ತೆಗೆದುಕೊಳ್ಳದೆ ಸಾಕ್ಷಿ ಸಮೇತ ದೂರು ನೀಡಿದರು ಒಂದು ನೋಟಿಸ್ ನೀಡದೆ ವಾರ್ಡನ್ ನೊಂದಿಗೆ ಡೀಲ್ ಆದ ಆರೋಪ ಸಹ ಕೇಳಿ ಬಂದಿದೆ. ಪ್ರಕರಣವನ್ನು ಸದ್ದಿಲದಂತೆ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂಬ ಆರೋಪ ಸಹ ಹೆಚ್ಚಿನ ಸದ್ದು ಮಾಡುತ್ತಿದೆ.
ಬಡ ವಿದ್ಯಾರ್ಥಿಗಳಿಂದ ಹಣ ವಸೂಲಿ
ಹಣ ಮಾಡುವ ಹುನ್ನಾರದಿಂದ ವಿದ್ಯಾರ್ಥಿಗಳ ವಿರೋಧದ ನಡುಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ಜಾರಿ ಮಾಡುವ ಮೂಲಕ 900 ರೂ ಹಣವನ್ನು ಕೆವಲ 2 ಟೀ ಶರ್ಟ್ ಗೆ ಅನಧಿಕೃತವಾಗಿ ವಸೂಲಿ ಮಾಡಿರುವ ಕುರಿತು ಈ ಅಧಿಕಾರಿಯ ವಿರುದ್ಧ ಕೆಲಪತ್ರಿಕೆಗಳಲ್ಲಿ ವರದಿಯಾಗಿತ್ತು. ನಂತರ ಇದನ್ನು ಕೈಬಿಡಲಾಯಿತು.
ಹಾಸ್ಟೆಲ್ ಮುಚ್ಚಿದ ಕೀರ್ತಿ:
ಅಂಬಾರಗೊಪ್ಪ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಬಿಸಿಎಂ ಅಧಿಕಾರಿ ಉಮೇಶ್ ಅವರ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಚ್ಚಲಾಗಿದೆ. ಮಾಧ್ಯಮಗಳ ವರದಿಗೂ ಬಿಸಿಎಂ ಅಧಕಾರಿ ತಲೆಕಡೆಸಿಕೊಂಡಿಲ್ಲ ಇದರಿಂದ ಇತ್ತಿಚೇಗೆ ಹಾಸ್ಟೆಲ್ ಕಟ್ಟಡ ಬೆಂಕಿಗೆ ಆಹುತಿಯಾಗಿ 1 ಕೋಟಿ ರೂ. ವೆಚ್ಚದಲ್ಲಿ 2013 ರಲ್ಲಿ ನಿರ್ಮಾಣವಾದ ಸುಸಜ್ಜಿತವಾದ ಸರ್ಕಾರಿ ಹಾಸ್ಟೆಲ್ ಸುಟ್ಟುಹೋಗಿದೆ.
ಎಷ್ಟೇಲ್ಲ ಸಾಧನೆಗೈದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸರ್ವರಲ್ಲಿ ಉತ್ತಮನಾದ ವ್ಯಕ್ತಿ ಎಂದು ಪರಿಗಣಿಸಿ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರ ಮರುಪರುಶೀಲಿಸುವಂತೆ ಒತ್ತಾಯಿಸಲಾಗಿದೆ.
Sarvottam awards