ಬಿಜೆಪಿ ಮತ್ತು ರಾಷ್ಟ್ರಭಕ್ತರ ಬಳಕ್ಕೆ ಎಸ್ ಡಿಪಿಐ ಎಚ್ಚರಿಕೆ-SDPI warns BJP and Rastra Bhaktara Balaga

Suddilive || Shivamogga

ಬಿಜೆಪಿ ಮತ್ತು ರಾಷ್ಟ್ರಭಕ್ತರ ಬಳಕ್ಕೆ ಎಸ್ ಡಿಪಿಐ ಎಚ್ಚರಿಕೆ-SDPI warns BJP and  Rastra Bhaktara Balaga

SDPI, BJP

ಬಿಜೆಪಿ ಮತ್ತು ರಾಷ್ಟ್ರಭಕ್ತರ ಬಳಗದ ತೀವ್ರ ಹೋರಾಟದ ಹಿನ್ನಲೆಯಲ್ಲಿ ಎಸ್ ಡಿಪಿಐ ಕೊನೆಗೂ ಎಂಟ್ರಿಕೊಟ್ಟಿದೆ. ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಜಾಗವನ್ನ ಮಾಜಿ ಡಿಸಿಎಂ ಆಟದ ಮೈದಾನ ಎಂದು ಹೇಳಿದ್ದನ್ನ ಎಸ್ ಡಿಪಿಐ ಖಂಡಿಸಿದೆ.

ಮಾಜಿ ಡಿಸಿಎಂ ಈಶ್ವರಪ್ಪನವರ ರಾಜಕೀಯ ಜೀವನವೇ ಇಲ್ಲವೆನ್ನುವ ಸ್ಥಿತಿಗೆ ತಲುಪಿದ್ದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂದು ಈಶ್ವರಪ್ಪನವರು ಸಮಾಜದಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಎಸ್ ಡಿ ಪಿಐನ ಇಮ್ರಾನ್ ಆರೋಪಿಸಿದ್ದಾರೆ.

ಗಾಂಧಿ ಬಜಾರ್ ನ ಮರಗಕಜ್ ಸುನ್ನಿ ಜಾಮೀಯ ಮಸೀದಿ ಅವರು ಸೂಕ್ತ ದಾಖಲಾತಿ ನೀಡಿ ಡಿಸಿ ಎಸ್ಪಿ ಅವರೊಂದಿಗೆ ಮಾತುಕತೆ ನಡೆಸಿ ಬಂದಿದ್ದಾರೆ. ಇದು ಆದ ಮೈದಾನವಲ್ಲ ಜಾಮೀಯ ಮಸೀದಿಗೆ ಸೇರಿದ ಜಾಗವೆಂದು ಮನವರಿಕೆ ನೀಡಿದ ನಂತರವೂ ಸಹ ಕೋಮುಗಲಭೆಗೆ ಪ್ರಚೋದನೆ ನೀಡುವ ಹೇಳಿಕೆಯನ್ನ‌ ಬಿಜೆಪಿ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ಮಾಡಿಕೊಂಡು ಬರುತ್ತಿರುವುದಾಗಿ ದೂರಿದರು.

ಶಾಸಕ ಚೆನ್ನಬಸಪ್ಪ ನವರು ನಮಾಜ್ ಮಾಡಲು ಬಿಡಲ್ಲ ಎಂದು ಹೇಳಲು ಇವರು ಯಾರು ಎಂದು ಪ್ರಶ್ನಿಸಿರುವ ಇಮ್ರಾನ್ ಸಂವಿಧಾನವು ಅವರರವರ ಹಬ್ಬವನ್ನ ಆಚರಿಸಲು ಹಕ್ಕು ನೀಡಿದೆ. ಇಂತಹ ಹೇಳಿಕೆ ನೀಡಿ ಶಾಸಕರುಸಹ ಮಾಜಿ ಡಿಸಿಎಂ ಈಶ್ವರಪ್ಪನವರಂತೆ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. 

ಶಿವಮೊಗ್ಗ ಜನರಿಗೆ ಈ ಜಾಗ ಯಾರದ್ದು ಎಂಬುದು ಗೊತ್ತು. ತಲತಲಾಂತರದಿಂದ  ಈದ್ಗ ಮೈದಾನದಲ್ಲಿ ನಮಾಜ್ ಮಾಡಿಕೊಂಡು ಬರುತ್ತಿರುವುದು ಮುಸ್ಲೀಂ ಸಮುದಾಯವೇ  ಎಂಬುದು ಜನರಿಗೆ ಗೊತ್ತು. ಇಂತಹವರ ಮಾತಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಇಮ್ರಾನ್ ಮನವಿ ಮಾಡಿದ್ದಾರೆ. 

SDPI warns BJP and  Rastra Bhaktara Balaga   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close