ಭದ್ರಾವತಿಯಲ್ಲಿ ಹಿಂಜಾವೇಯಿಂ ನಡೆದ ರಾಮನವಮಿ-Ram Navami celebrated from Hinjave

Suddilive || bhadravathi

ಭದ್ರಾವತಿಯಲ್ಲಿ ಹಿಂಜಾವೇಯಿಂ ನಡೆದ ರಾಮನವಮಿ-Ram Navami celebrated from Hinjave  

Rama, navami

ರಾಮನವಮಿಯ ಅಂಗವಾಗಿ ಹೊಸ ಸಿದ್ದಾಪುರದ ಚೌಡೇಶ್ವರಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶ್ರೀರಾಮಚಂದ್ರ ಮಹಾಪ್ರಭುಗಳ ಮೂರ್ತಿಗೆ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹ ಸಂಚಾಲಕರಾದ ಸತೀಶ್ ದಾವಣಗೆರೆ ರವರು ಮತ್ತು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ್ ಅರಳಿಹಳ್ಳಿ ರವರು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. 

ಸಾಂಸ್ಕೃತಿಕ ಚಂಡೆ ಮೇಳದ ನೃತ್ಯದೊಂದಿಗೆ ಹೊಸ ಸಿದ್ದಾಪುರದ ವಿಜ್ಞೇಶ್ವರ ದೇವಸ್ಥಾನವನ್ನು ತಲುಪಿ ಸ್ವಾಮಿ ವಿಘ್ನೇಶ್ವರನಿಗೆ ಪೂಜೆ ನಡೆದ ನಂತರ ರಾಮನವಮಿಯ ಅಂಗವಾಗಿ ಏರ್ಪಡಿಸಿದ್ದ ಹಿಂದೂ ಜಾಗೃತಿ ಸಭೆಗೆ ಚಾಲನೆ ನೀಡಲಾಯಿತು. 

ಸಭೆಯ ಪ್ರಾರ್ಥನೆಯನ್ನು ಶ್ರೀ ಚೌಡೇಶ್ವರಿ ಭಜನಾ ಮಂಡಳಿಯವರು ನೆರವೇರಿಸಿದರು. ಪ್ರಾಸ್ತಾವಿಕ ನುಡಿಗಳನ್ನು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ ಅರಳಿಹಳ್ಳಿ ರವರು ಹಿಂದೂ ಸಮಾಜ ಜಾಗೃತಿ ಆಗಬೇಕೆಂದು. ಗೋ ರಕ್ಷಣೆಗೆ ಹಿಂದೂ ಯುವಕರು ಸಿದ್ದರಾಗಬೇಕೆಂದು ಕರೆ ನೀಡಿದರು. 

ದಿಕ್ಸೂಚಿ ಭಾಷಣವನ್ನು ಶ್ರೀಯುತ ಸತೀಶ್ ದಾವಣಗೆರೆ ಅವರು ಶ್ರೀರಾಮನ ಆದರ್ಶ ಬದುಕಿನ ವಿಚಾರವನ್ನು ದೇಶದ ಭದ್ರತೆಯ ವಿಚಾರವನ್ನು ಹಂಚಿಕೊಂಡರು. ಸಭಾ ಕಾರ್ಯಕ್ರಮ ಮುಗಿದ ನಂತರ ಪ್ರಸಾದ ವಿನಿಯೋಗದ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹೊಸ ಸಿದ್ದಾಪುರ ಗ್ರಾಮದ ಹಿಂದು ಜಾಗರಣ ವೇದಿಕೆ ಭದ್ರಾವತಿ ತಾಲೂಕು ಸಂಯೋಜಕರಾದ ರಕ್ಷಿತ್ , ಕಾರ್ಯಕರ್ತರುಗಳಾದ ರೋಹಿತ್. ನಂದನ್. ಸಚಿನ್. ಊರಿನ ಹಿರಿಯರಾದ ಶ್ರೀನಿವಾಸ್. ನಂಜಪ್ಪ ಮುಂತಾದ ಕಾರ್ಯಕರ್ತರು ಮತ್ತು ಗ್ರಾಮಸ್ಥರಿಂದ ರಾಮನವಮಿಯನ್ನು ಆಚರಿಸಲಾಯಿತು.

Ram Navami celebrated from Hinjave

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close