Suddilive || Shivamogga
ಎಸಿ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ!Raid on illegal sand mining led by AC!
ಶಿವಮೊಗ್ಗದ ಹಾಡೋನಹಳ್ಳಿಯಲ್ಲಿ ದೂರು ಬಂದ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ, ತಹಶೀಲ್ದಾರ್ ರಾಜೀವ್ ನೇತೃತ್ವದಲ್ಲಿ ಖಡಕ್ ದಾಳಿ ನಡೆದಿದೆ.
ತುಂಗ ನದಿಯ ಒಡಲಿಗೆ ಮೋಟರ್ ಹಾಕಿ ಮರಳನ್ನ ತೆಗೆಯುವ ಸಾಹಸಕ್ಕೆ ಅಕ್ರಮ ಮರಳುಗಾರರು ಕೈಹಾಕಿದ್ದು, ಈ ಹಿನ್ನಲೆಯಲ್ಲಿ ಎಸಿ ಮತ್ತು ತಹಶೀಲ್ದಾರ್ ಅವರ ದಾಳಿ ಮಹತ್ವ ಪಡೆದಿದೆ.
ದಾಳಿಯಲ್ಲಿ 20 ಮೆಟ್ರಿಕ್ ಟನ್ ಮರಳು, ಉಪಕರಣಗಳು, ಪೈಪ್ ಗಳು ಪತ್ತೆಯಾಗಿದೆ. AC ಅವರ ಅಧ್ಯಕ್ಷತೆಯಲ್ಲಿ ನಡೆದ ದಾಳಿಯಲ್ಲಿ ಪತ್ತೆಯಾದ ಸಲಕರಣೆಗಳನ್ನು ಸೀಸ್ ಮಾಡಲಾಗಿದೆ.
ಸೀಜ್ ಮಾಡಲಾದ ಸಲಕರಣೆಯಲ್ಲಿ ಪೊಲೀಸ್ ಗೆ ಹಸ್ತಾಂತರ ಮಾಡಲಾಯಿತು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಎಸಿ ಅವರ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.
Raid on illegal sand mining led by AC!