Suddilive || Shiralkoppa
ಅಕ್ರಮ ಗೋಕಸಾಯಿ ಖಾನೆ ಮೇಲೆ ದಾಳಿ-Raid on illegal cow slaughterhouse
ಶಿರಾಳಕೊಪ್ಪದಲ್ಲಿ ಅಕ್ರಮ ಗೋಕಸಾಯಿ ಖಾನೆಯ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 11,500 ರೂ. ಮೌಲ್ಯದ 80 ಕೆಜಿ ಗೋಮಾಂಸ ಪತ್ತೆಯಾಗಿದೆ.
ಶಿರಾಳಕೊಪ್ಪದ ಹಳ್ಳೂರು ಕೇರಿಯಲ್ಲಿ ಗೋಮಾಂಸ ಕತ್ತರಿಸುವ ಕಸಾಯಿಖಾನೆಯ ಮೇಲೆ ಪಿಎಸ್ಐ ಪ್ರಶಾಂತ್ ನೇತೃತ್ವದಲ್ಲಿ ಭರ್ಜರಿ ದಾಳಿ ನಡೆದಿದೆ. ದಾಳಿ ನಡೆದ ವೇಳೆ ಕಸಾಯಿ ಖಾನೆಯ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಗೋವುಗಳ ತಲೆಬುರುಡೆಗಳು, ಮಾಂಸಗಳು ಆಯುಧಗಳು ಮಾಂಸ ಕತ್ತರಿಸಲು ಬಳಸುವ ಮರದ ದಿಮ್ಮಿಯನ್ನ ವಶಕ್ಕೆ ಪಡೆಯಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Raid on illegal cow slaughterhouse