Suddilive || Shivamogga
ಆಯನೂರಿನಲ್ಲಿ ಭಯೋತ್ಪದಕತೆಯ ವಿರುದ್ಧ ಪ್ರತಿಭಟನೆ-Protest against terrorism in Ayanur
ಇಂದು ಆಯನೂರು ಗ್ರಾಮದಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹಾಗೂ ಮುಸ್ಲಿಂ ಮುಖಂಡರುಗಳು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯಿಂದ ಹಿಂದುಗಳ ಹತ್ಯೆಯನ್ನು ಖಂಡಿಸಿ ಬಸ್ ನಿಲ್ದಾಣದಿಂದ ಪ್ರತಿಭಟಿಸಲಾಯಿತು.
ಬಸ ನಿಲ್ದಾಣದಿಂದ ಪೆಟ್ರೋಲ್ ಬಂಕ್ ವರೆಗೂ ಮೆರವಣಿಗೆ ಬಂದು ನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಭಯೋತ್ಪಾದನೆಯನ್ನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಅಂಗವಾಗಿ ಒಂದು ನಿಮಿಷ ಮೌನಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಪ್ರತಿಭಟನೆಯಲ್ಲಿ ಕುಪೇಂದ್ರಪ್ಪ ಅರಳಿಕಟ್ಟೆ ಮಂಜಪ್ಪ, ಹನುಮಂತಪ್ಪ,ಮುತ್ತು ಶೆಟ್ರು, ಉದಯ್ ಶೆಟ್ರು ಸೂಡೂರ್ ಶಿವಣ್ಣ ನಿರಂಜನ್ ಗೌಡ್ರು, ಬಸಪ್ಪ ಗೌಡ್ರು, ಛತ್ರಪತಿ ನಾಯಕ, ಗಂಗಾ ನಾಯಕ್, ಹಾಗೂ ಮುಸ್ಲಿಂ ಮುಖಂಡರುಗಳಾದ ಜಾಕಿರ್ ಸಾಬ್ರು, ಸೈಯದ್ ಮುಸ್ತಾಕ್, ಸೈಯದ್ ಅಲ್ತಾಫ್, ಸನಾವುಲ್ಲಾ, ಬಾಬಣ್ಣ, ಸೈಯದ್ ಅಹ್ಮದ್ ಕೋಟೆ, ಸೈಫ್ ಉಲ್ಲಾ ಖಾನ್,ಇನ್ನು ಮುಂತಾದ ಮುಖಂಡರುಗಳು ಸುಮಾರು ನೂರು ಜನ ಭಾಗವಹಿಸಿದ್ದರು.
Protest against terrorism in Ayanur