ಮಧು ಬಂಗಾರಪ್ಪನವರನ್ನ ಹಾಡಿಹೊಗಳಿದ ಸಚಿವ ಡಿ.ಸುಧಾಕರ್-praised Madhu Bangarappa

 Suddilive || Shivamogga

ಮಧು ಬಂಗಾರಪ್ಪನವರನ್ನ ಹಾಡಿಹೊಗಳಿದ ಸಚಿವ ಡಿ.ಸುಧಾಕರ-Minister D. Sudhakar praised Madhu Bangarappa.

Praised, Bangarappa


ವೇದಿಕೆಯ ಮೇಲೆ ಸಚಿವ ಮಧು ಬಂಗಾರಪ್ಪನವರನ್ನ ಯೋಜನೆ ಮತ್ತು ಸಾಂಖಿಕ್ಯ ಇಲಾಖೆಯ ಸಚಿವ ಡಿ ಸುಧಾಕರ್ ಹಾಡಿಹೊಗಳಿದ್ದಾರೆ. 

ಸೊರಬ ತಾಲೂಕು ಹುರುಳಿ ಗ್ರಾಮದಲ್ಲಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇವರಾಜ್ ಅರಸ್ ಬಿಟ್ಟರೆ ಹಿಂದುಳಿದ ವರ್ಗಗಳ ಸಿಎಂ ಆಗಿ ಬಂಗಾರಪ್ಪನವರು ನಡೆಸಿಕೊಂಡು ಬಂದರು. ಈಗ ಸಿದ್ದರಾಮಯ್ಯ ಅರಸರ ಹಾದಿಯಲ್ಲೇ ನಡೆದುಕೊಂಡು ಬರುತ್ತಿದ್ದಾರೆ ಎಂದರು.

ಮಧು ಅವರು ಸಹ ತಂದೆಯರವರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ದೇವಸ್ಥಾನ ನಿರ್ಮಿಸುವುದಕ್ಕಿಂತ ಒಂದು ಶಾಲೆ ನಿರ್ಮಿಸಿದರೆ ಪುಣ್ಯ ಬರುತ್ತದೆ. ಅತ್ಯಂತ ಕಮಿಟೆಡ್ ಲೀಡರ್ ಆಗಿ ಮಧು ಬೆಳೆಯುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಎಲ್ಲಾ ವರ್ಗದ ಶಾಸಕರೊಂದಿಗೆ ಹೆಜ್ಜೆಹಾಕುತ್ತಿದ್ದಾರೆ ಎಂದು ಸಚಿವರನ್ನ ಹಾಡಿ ಹೊಗಳಿದ್ದಾರೆ. 

ನಾನು ಜೈನ ಸಮುದಾಯದವನು. ನನ್ನ ಕ್ಷೇತ್ರದಲ್ಲಿ 50-100 ಮತಗಳಿವೆ ಬೋವಿ ಸಮಾಜದ ಸಹಕಾರದಿಂದ ಐದು ಬಾರಿ ಗೆದ್ದುಬಂದಿದ್ದೇನೆ. ಎಲ್ಲರನ್ನ ಅಪ್ಪಿಕೊಳ್ಳುವುದು, ಸ್ನೇಹಬೆಳೆಸುವುದನ್ನ ಹೇಳಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಅನೇಕರು ಶಿಕ್ಷಣ ಸಚಿವರಾಗಿ ಫೇಲ್ಯೂರಾಗಿದ್ದಾರೆ. ಆದರೆ ಮಧು ಪಾಸ್ ಆಗಿದ್ದಾರೆ  ಎಂದರು. 

praised Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close