suddilive || Shivamogga
ಸಾಂತ್ವಾನ ಹೇಳಲು ಬಂದ ಸಚಿವರು ಮತ್ತು ಶಾಸಕರಿಗೆ ಪಲ್ಲವಿ ತಾಯಿಯ ಪ್ರಶ್ನಿಸಿದ್ದು ಏನು?-What did Pallavi's mother ask the ministers and MLAs who came to offer their condolences?
ಭಯೋತ್ಪಾದಕರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಅವರ ಮನೆಗೆ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮೊದಲಾದ ನಾಯಕರು ದಾವಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಈ ವೇಳೆ ಮಂಜುನಾಥ್ ಅವರ ಪತ್ನಿ ತಾಯಿ ಗೀತಾ ರವರು ಸರ್ಕಾರದ ಪ್ರತಿನಿತಿಗಳಾದ ನೀವು ಭರವಸೆ ಕೊ್ಟಿದ್ದಕ್ಕೆ ನಮ್ಮ ಅಳಿಯ, ಮಗಳು ಮೊಮ್ಮಗ ಕಾಶ್ಮೀರಕ್ಕೆ ಹೋಗಿದ್ದಾರೆ. ಕಾಶ್ಮಿರ ಸುರಕ್ಷಿತವಾಗಿಲ್ಲ ಎಂದಾಗಿದ್ದರೆ ಪ್ರವಾಸಕ್ಕೆ ಹೋಗುತ್ತಿರಲಿಲ್ಲ ಎಂಬ ಮಾತನ್ನ ಸಚಿವ ಮಧು ಬಂಗಾರಪ್ಪನವರಿಗೆ ತಿಳಿಸಿದರು.
ಈ ವೇಳೆ ಸಮಲೋಚನೆಯಾಗಿಯೇ ಸಚಿವರು ಮಾತನಾಡಿ, ಈ ಸಮಯದಲ್ಲಿ ಏನು ಮಾತನಾಡಿದರೂ ಸರಿಯಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಹೇಳಿದರು. ನಂತರ ಮಾಧ್ಯಮಗಳಿಗೂ ಮಾತನಾಡಿದ ಸಚಿವರು ರಾಜ್ಯದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸರ್ಕಾರ ನಿಮ್ಮೊಂದಿಗೆ ಇದ್ದೇವೆ ಎಂಬ ಭರವಸೆ ನೀಡಿದ್ದರು.
ಆದರೆ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರು ಸಂತ್ರಸ್ತ ಕುಟುಂಬದವರಿಗೆ ಮಾತನಾಡದೆ, ಮಾಧ್ಯಮಗಳ ಮುಂದೆ ಅಬ್ಬರಿಸಿದ್ದಾರೆ. ಮಗನನ್ನ ಕಳೆದುಕೊಂಡವರಿಗೆ ಸಾಂತ್ವಾನ ಹೇಳೋದು ಕಷ್ಟ. ಕೇಂದ್ರ ಸರ್ಕಾರ ಮೇಲೆ ವಾಗ್ದಾಳಿ ನಡೆಸಿದ ಬೇಳೂರು ಭಯೋತ್ಪಾದಕರನ್ನ ಬಿಡಲ್ಲ ಎಂದವರು ಪ್ರವಾಸಿಗರಿಗೆ ಬಿಟ್ಟು ಏನು ಮಾಡುದ್ರಿ. ಕೇಂದ್ರ ಸರ್ಕಾರ ಪುಲ್ವಾಮ ದಾಳಿ ನಡೆಸಿದಂತೆ ಇಲ್ಲಿ ನಡೆಯಬೇಕಿದೆ. ಎಂದು ಗುಡುಗಿದರು.
ರಾಜ್ಯದಲ್ಲಿ ಮೂರು ಸಾವಾಗಿದೆ. ನಮ್ಮ ಜಿಲ್ಲೆಯವರು ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ವಿಪಲವಾಗಿದೆ. ಪ್ರವಾಸಿಗರು ಹೋಗಲು ಹೇಳುತ್ತೀರಿ. ನೀವು ಭರವಸೆ ಕೊಟ್ಟಿದ್ದಕ್ಕೆ ಹೋಗಿದ್ದೇವೆ. ಜಮ್ಮು ಕಾಶ್ಮೀರದ ಸರ್ಕಾರವೂ ವಿಫಲವಾಗಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಕೇಂದ್ರ ಪವರ್ ಕೊಟ್ಟಿಲ್ಲ. ಕಾರ್ಯಕ್ರಮಕ್ಕೆ ಹೋಗೋದು ಮಾತ್ರ ವಾಗಿದೆ. ಕುಟುಂಬದೊಂದಿಗೆ ನಾವಿದ್ದೇ ಎಂದರು.
Pallavi's mother ask the ministers