ವಿನೋಬ ನಗರ ಪಿಐ ಸೇವೆಯಿಂದ ಅಮಾನತು-PI suspended from service!

 Suddilive || Shivamogga

ವಿನೋಬ ನಗರ ಪಿಐ ಸೇವೆಯಿಂದ ಅಮಾನತು-Vinoba Nagar PI suspended from service


ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಅವರನ್ನ ಅಮಾನತ್ತುಗೊಳಿಸಿ ದಾವಣಗೆರೆ ಐಜಿಪಿ ರವಿಕಾಂತೇ ಗೌಡ ಆದೇಶಿಸಿದ್ದಾರೆ. 

ಕರ್ತವ್ಯದಲ್ಲಿ‌ ದುರ್ವರ್ತನೆ ಹಾಗೂ ಅಶಿಸ್ತು ಹಿನ್ನೆಲೆಯಲ್ಲಿ ‌ಸಸ್ಪೆಂಡ್ ಆಗಿರುವುದಾಗಿ ತಿಳಿದು ಬಂದಿದೆ. ಈದ್ಗಾ ಮೈದಾನದ ಮಾಲೀಕತ್ವ ವಿವಾದ ಸಂಬಂಧ ಎಸ್ಪಿಯವರು ಕರೆದಿದ್ದ ಸಭೆಗೆ ಚಂದ್ರಕಲಾ ಅವರು ಗೈರು ಆಗಿರುವ ಆರೋಪವೂ ಕೇಳಿ ಬಂದಿದೆ. 

ನಾಲ್ಕು ದಿನದ ಹಿಂದೆ ನಗರದ ಎಲ್ಲಾ ಪಿಐ ಹಾಗೂ ಪಿಎಸೈಗಳ ಸಭೆಯನ್ನ ಎಸ್ಪಿ ಅವರು ಕರೆದಿದ್ದರು. ಚಂದ್ರಕಲಾ ಹೊರತು ಪಡಿಸಿ ಸಭೆಗೆ ಉಳಿದೆಲ್ಲಾ ಪಿಐ ಹಾಗೂ ಪಿಎಸ್ಐ ಗಳು ಹಾಜರಾಗಿದ್ದರು‌. ಚಂದ್ರಕಲಾರ ಗೈರನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು ಮೇಡಂಗೆ ಡಿಎಸ್ಬಿ ಬ್ರಾಂಚ್ ಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. 

ಇದೇ ವೇಳೆ ಸೂಕ್ತ ಶಿಸ್ತು ಕ್ರಮಕ್ಕೂ ಸಹ ಐಜಿಪಿಗೆ ಶಿಫಾರಸು ಮಾಡಿದ್ದರು ಎಂದು ತಿಳಿದು ಬಂದಿದೆ. ಎಸ್ಪಿ ಶಿಫಾರಸಿನ ಹಿನ್ನೆಲೆಯಲ್ಲಿ ಚಂದ್ರಕಲಾರನ್ನು ಸೇವೆಯಿಂದ ಅಮಾನತುಗೊಳಿಸಿ ಐಜಿಪಿ‌ ಆದೇಶಿಸಿರುವುದಾಗಿ ತಿಳಿದು ಬಂದಿದೆ. ಈ ಮೊದಲು ಹಲವು ವಿಷಯದಲ್ಲಿ ಸಾಕಷ್ಟು ಚರ್ಚೆಗೆ ಚಂದ್ರಕಲಾರ ನಡವಳಿಕೆ ಎಡೆಮಾಡಿಕೊಟ್ಟಿತ್ತು. 

ದುಡ್ಡುಕೊಟ್ಟರೆ ಜಡ್ಜ್ ಸಹ ಜಾಮೀನು ನೀಡುತ್ತಾರೆ ಎಂದು ಹೇಳಿದ್ದ ಚಂದ್ರಕಲಾ ಈ‌ ಸಂಬಂಧ ಇಲಾಖಾ ತನಿಖೆ ಎದುರಿಸುತ್ತಿರುವ ಚಂದ್ರಕಲಾ ಈ‌ ಕುರಿತು ಮಾಧ್ಯಮವೊಂದು ವಿಸ್ತೃತವಾಗಿ ಸುದ್ದಿ ಮಾಡಿತ್ತು. ಚಂದ್ರಕಲಾ ಅವರ ಅಮಾನತ್ತಿನ ಬಗ್ಗೆ ಮಾಹಿತಿ ಕೇಳಿದ  ಸುದ್ದಿಲೈವ್ ಗೆ ಎಸ್ಪಿ ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ ಐಜಿಪಿ ರವೀಕಾಂತೇಗೌಡರವರು ಚಂದ್ರಕಲಾರ ಅಮಾನತ್ತನ್ನ ಸ್ಪಷ್ಟಪಡಿಸಿದ್ದಾರೆ. ಮೂರು ದಿನಗಳ ಹಿಂದೆಯೇ ಅಮಾನತ್ತಾಗಿದೆ ಎಂದು ತಿಳಿಸಿದ್ದಾರೆ. 

PI suspended from service

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close