Suddilive || Bhadravathi
ಪಿಡಿಒ ಮತ್ತು ಕಾರ್ಯದರ್ಶಿಗಳು ಲೋಕ ಬಲೆಗೆ- PDO and secretaries trapped by Likayukta
ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಪಿಡಿಒ ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಆರೋಪದ ಅಡಿ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿನ ಸರ್ವೆ ನಂಬರ್ 144 ರಲ್ಲಿನ 30×40 ಖಾಲಿ ಜಾಗವನ್ನ ಚೆಕ್ ಬಂದಿ ನಿಗದಿಪಡಿಸುವಂತೆ ಕೋರಿ ಶಾಲಾವಾಹನ ಕೆಲಸ ಮಾಡಿಕೊಂಡಿದ್ದ ದಿನೇಶ್ ಎಂಬುವರು ಅರ್ಜಿ ಸಲ್ಲಿಸಿ ಇದನ್ನ ಇ-ಸ್ವತ್ತು ಮಾಡಿಕೊಡಲು ಕೋರಿದ್ದರು.
ಈ ಕೆಲಸಕ್ಕೆ ಪಿಡಿಒ ಮಹಮದ್ ಅಲಿ ಮತ್ತು ಗ್ರಾಮಪಂಚಾಯಿತಿ ಕಾರ್ಯದರ್ಶಿ ಸುರೇಶ್ 30 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಇಂದು ದಿನೇಶ್ 15 ಸಾವಿರ ರೂ.ಹಣವನ್ನ ಗ್ರಾಮ ಪಂಚಾಯಿತಿ ಎದುರು ಲಂಚವಾಗಿ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇಬ್ವರನ್ನೂ ಲೋಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯು ದಿನಾಂಕ:03-04-2025 ರಂದು ಸಂಜೆ ಸುಮಾರು 04-15 ಗಂಟೆಗೆ ಆಪಾದಿತರಾದ ಶ್ರೀ ಸುರೇಶ್ ಪಿ.ಹೆಚ್ ಕಾರ್ಯದರ್ಶಿ ಮತ್ತು ಮಹಮದ್ ಅಲಿ ಪ್ರಭಾರ ಪಿಡಿಓ ರವರು ಭದ್ರಾವತಿ ತಾಲ್ಲೂಕು ಕಂಬದಾಳ ಹೊಸೂರು ಗ್ರಾಮ ಪಂಚಾಯಿತಿ ರವರು ಕಂಬದಾಳ ಗ್ರಾಮ ಪಂಚಾಯಿತಿ ಎದುರು ಪಿರ್ಯಾದಿಯಿಂದ 15,000/-ಲಂಚದ ಹಣವನ್ನು ತೆಗೆದುಕೊಂಡಿದ್ದು, ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ. ಮತ್ತು ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಸರ್ಕಾರಿ ನೌಕರರಾದ ಶ್ರೀ ಸುರೇಶ್ ಪಿ.ಹೆಚ್ ಕಾರ್ಯದರ್ಶಿ ಮತ್ತು ಮಹಮದ್ ಅಲಿ ಪ್ರಭಾರ ಪಿಡಿಓ ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರು ಶ್ರೀ ಬಿ.ಪಿ. ಚಂದ್ರಶೇಖರ್ ರವರು ಕೈಗೊಂಡಿರುತ್ತಾರೆ.
ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಶ್ರೀ.ಮಂಜುನಾಥ ಚೌದರಿ. ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ.ಬಿ.ಪಿ.ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಕಾರ್ಯಾಚರಣೆ ನಡೆಸಿದ್ದು, ಟ್ರ್ಯಾಪ್ ಕಾಲಕ್ಕೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಶ್ರೀ ವೀರಬಸಪ್ಪ ಎಲ್ ಕುಸಲಾಪುರ ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ಸಿಬ್ಬಂದಿಯವರಾದ ಶ್ರೀ ಯೋಗೇಶ್ ಸಿ.ಹೆಚ್.ಸಿ, ಶ್ರೀ ಟೀಕಪ್ಪ ಸಿ.ಹೆಚ್.ಸಿ, ಶ್ರೀ ಸುರೇಂದ್ರ ಸಿ.ಹೆಚ್.ಸಿ, ಶ್ರೀ ಬಿ,ಟಿ ಚೆನ್ನೇಶ್, ಸಿ.ಪಿ.ಸಿ ಶ್ರೀ ದೇವರಾಜ್, ಸಿ.ಪಿ.ಸಿ, ಶ್ರೀ ಪ್ರಕಾಶ್ ಬಾರಿಮರದ ಸಿಪಿಸಿ, ಶ್ರೀಮತಿ ಅಂಜಲಿ, ಮ.ಪಿ.ಸಿ, ಶ್ರೀಮತಿ ಚಂದ್ರಿಬಾಯಿ ಮ.ಪಿ,ಸಿ ಶ್ರೀ ಗೋಪಿ ಎ.ಪಿ.ಸಿ, ಶ್ರೀ ಪ್ರದೀಪ್ ಎಹೆಚ್‌ಸಿ ರವರು ಹಾಜರಿರುತ್ತಾರೆ.
PDO and secretaries trapped by Likayukta