Suddilive || Shivamogga
ಮುಂದಿನ ವರ್ಷದಿಂದ ನಮಾಜ್ ಮಾಡಲು ಬಿಡಲ್ಲ, ಏ.8 ರ ಒಳಗೆ ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆ-ಶಾಸಕ ಚೆನ್ನಿ-Namaz will not be allowed from next year, massive protest if it is not fixed by April 8 - MLA Chenni!
ಪಾಲಿಕೆಯ ಆಸ್ತಿಯನ್ನ ಲಫ್ಟಾಯಿಸುವ ಕಾರ್ಯ ಬಹಳಷ್ಟು ವರ್ಷದಿಂದ ನಡೆಯುತ್ತಾ ಬಂದಿದೆ. ಮುಟ್ಟಿದೆಲ್ಲ ನಮ್ಮದು ಎನ್ನುವ ಭಾವನಗಳ ಜೊತೆ ದಾದಾಗಿರಿ ನಡೆಸಲಾಗುತ್ತಿದೆ ಎಂದು ಶಾಸಕ ಚೆನ್ನಬಸಪ್ಪ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಮುಸ್ಲೀಂರಿಂದ ಈ ರೀತಿಯ ನಡವಳಿಕೆ ನಡೆಯುತ್ತಿದೆ. ವಕ್ಫ್ ಆಸ್ತಿ ಎಂಬ ಹೆಸರಿನಲ್ಲಿ ದೇವಸ್ಥಾನ, ರೈತರ ಆಸ್ತಿಯನ್ನ ಲಫ್ಟಾಯಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನವನ್ನ ವಕ್ಫ್ ಕಬಳಿಸುತ್ತಿದೆ. ನಕಲಿ ದಾಖಲೆಗಳನ್ನ ಸೃಷ್ಠಿಸಿ ನಮ್ಮದು ಎಂದು ಹೇಳಿ ಕಬಳಿಸಲು ಹೊರಡಲಾಗಿದೆ ಎಂದರು.
2012 ರ ನಂತರ ವಸತಿಗೆ ಇದ್ದ ಜಾಗ ನಂತರ ಪಾಲಿಕೆ ಸಿಡಿಪಿಯಲ್ಲಿ ಪಾಲಿಕೆ ಜಾಗವಾಗಿದೆ. ಹಬ್ಬಕ್ಕೆ ವರ್ಷಕ್ಕೆ ಎರಡು ಬಾರಿ ನಮಾಜ್ ಗೆ ಅವಕಾಶ ಕಲ್ಪಿಸಲಾಯಿತು. ನಮಾಜ್ ಮಾಡಲು ಜಾಗ ಬಿಡಲಾಗಿದೆ. ದಯಾನಂದ್ ಡಿಸಿ ಆಗಿದ್ದಾಗ ಹಲವೆಡೆ ಜಾಗದಲ್ಲಿ ನಮಾಜ್ ಗೆ ಅವಕಾಶಕಲ್ಪಿಸಲಾಗಿತ್ತು. ಕಂಡೀಷನ್ ಮೂಲಕ ನಮಾಜ್ ಗೆ ಅವಕಾಶ ಕಲ್ಪಿಸಲಾಯಿತು ಎಂದರು.
ನಮ್ಮ ಜಾಗ ಎಂದು ಮೈದಾನವನ್ನ ಕಬಳಿಸಲು ಹೊರಡಿದ್ದಾರೆ. ಇದರ ಉದ್ದೇಶ ಯಾವುದು. ವಕ್ಫ್ ತಿದ್ದುಪಡಿ ಬಿಲ್ ವೇಳೆ ಮೈದಾನಕ್ಕೆ ಬೇಲಿಹಾಕಲಾಗಿದೆ. ಸಾರ್ವಜನಿಕರ ಆಸ್ತಿಗೆ ಕೈಹಾಕಲಾಗಿದೆ. ಈ ಹಿಂದೆ ರಸ್ತೆನೇ ನಮ್ಮದು ಎನ್ನುವ ಪ್ರಯತ್ನ ನಡೆದಿದೆ. ವರ್ಷಕ್ಕೆ ಎರಡು ಬಾರಿ ಬಿಡಲಾಗಿತ್ತು. ಮುಂದಿನ ಬಾರಿಯಿಂದ ನಮಾಜ್ ಮಾಡಲು ಬಿಡಲ್ಲ ಎಂದು ಎಚ್ಚರಿಸಿದರು.
ದುಷ್ಟ ಮುಸ್ಲೀಂರ ವಿರುದ್ದ ಕ್ರಮ ಆಗಬೇಕು. ಅಕ್ರಮವಾಗಿ ಪಾಲಿಕೆ ಖಾತೆ ಏರಿಸಿದ್ದಾರೆ. ವಠಾರೆ ಆಯುಕ್ತರಾಗಿದ್ದಾಗ ಒಂದು ಹೀಯರಿಂಗ್ ಆಗಿದೆ. ಓವರ್ ಲುಕ್ ಮಾಡಿ ಅಂದಿನ ಜಿಲ್ಲಾಧಿಕಾರಿಗಳು ಅಕ್ರಮ ಖಾತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಲಯಕ್ಕೂ ಹೋಗ್ತೇವೆ. 2016-17 ರಲ್ಲಿ ಕಮಿಟಿ ರಚಿಸಲಾಗಿತ್ತು. ಕಮಿಟಿ ಮಾಡುವ ಕೆಲಸ ವೇದವಾಕ್ಯವಾಗಿದೆ.
ಆಕ್ಷೇಪಣೆಯನ್ನ ತಿರಸ್ಕರಿಸಿ ಖಾತೆ ಏರಿಸಲಾಗಿದೆ. ಅಕ್ರಮ ಖಾತೆ ರದ್ದಾಗಬೇಕಿದೆ. ಅಕ್ರಮ ಖಾತೆಯನ್ನ ಮಾಡಿರುವುದನ್ನ ಈಗಿನ ಅಧಿಕಾರಿಗಳಿಗೆ ಆದೇಶ ಮಾಡಲು ಬರೊಲ್ಲ ಎಂದು ಮೇಲಧಿಕಾರಿಗಳಿಗೆ ತೋರಿಸಲಾಗುತ್ತಿದೆ. 1945-46 ರಲ್ಲಿ ನಮಾಜ್ ಗೆ ಅವಕಾಶಿವತ್ತು. 1991 ರಲ್ಲಿ ಅಳತೆ ದಾಖಲಾಗುತ್ತದೆ. 2018 ರಲ್ಲಿ ಖಾತೆ ಆಗುತ್ತದೆ. ಆಗಿನ ವಕ್ಫ್ ಅಧಿಕಾರಿ ಜಿಲ್ಲಾಧಿಕಾರಿಗಳು ಎಡಿಎಲ್ ಆರ್ ಗೆ ಆದೇಶ ಮಾಡಿ ಖಾತೆ ಏರಿಸಲಾಗುತ್ತದೆ. ಚೆಕ್ ಬಂದಿ ಇಲ್ಲದೆ ಖಾತೆ ಏರಿಸಲಾಗುತ್ತದೆ.
ಸರ್ಕಾರಿ ದಾಖಲೆಗಳನ್ನ ಏರಿಸುವ ಕೆಲಸವಾಗಿದೆ. ವಕ್ಫ್ ದಾಖಲೆ ಕೇಳಿದರೆ ಮೂಲದಾಖಲೆಗಳಿಲ್ಲ. ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೊಡಲಾಗಿದೆ. ಗೆಜೆಟ್ ನೋಟಿಫಿಕೇಷನ್ ನಲ್ಲಿ ಇರುವ ಜಾಗನೇ ಬೇರೆ. ಕಮಿಷನರ್ ಚಾರುಲತಾರಿದ್ದಾಗ ಇದಕ್ಕೆ ಖಾತೆ ಏರಿಸಲು ಬರಲ್ಲ ಎಂದಿದ್ದರು. ಎಡಿಎಲ್ ಆರ್ ಮೂಲಕ ಖಾತೆ ಏರಿಸಲಾಗುತ್ತದೆ.
ಕೃಷ್ಣರಾವ್ ಎಂಬ ಕಾನೂನು ಸಲಹೆಗಾರರಿದ್ದಾರೆ. ನಿಮ್ಮದು ಅಲ್ಲದೆ ಇರುವ ಜಾಗಕ್ಕೆ ಲೀಗಲ್ ಒಪಿನಿಯನ್ ಕೊಟ್ಟಿದ್ದಾರೆ. ಕೋಟ್ಯಾಂತರ ರೂ ಬೆಲೆ ಬಾಳುವ ಆಸ್ತಿಯನ್ನ ಕೊಡಲು ಲೀಗಲ್ ಒಪಿನಿಯನ್ ಕೊಟ್ಟ ಕೃಷ್ಣರಾವ್ ವಿರುದ್ಧ ಕಂದಾಯ ಇಲಾಖೆಯ ಆದಿಜಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಖಾತೆ ನಕಲು ಟೈಟ್ಲಾಗಲು ಸಾಧ್ಯವಿಲ್ಲ. ಟೈಟ್ಲು ಬೇರೆಯಿದೆ. ಅಜರ್ ನಗರ ಎಲ್ಲಿದೆ ಗೊತ್ತಾ? ಯಾವುದೋ ಖಾತೆಯನ್ನ ಜಿಲ್ಲಾಧಿಕಾರಿಗಳ ಮೈದಾನದ ಎದುರಿನ ಜಾಗಕ್ಕೆ ಪೋಣಿಸಲಾಗಿದೆ. ಬೇರೆ ಮಸೀದಿ, ಜಾಗವನ್ನ ಕೇಳ್ತಾಯಿಲ್ಲ. ಸಹ್ಯಾದ್ರಿ ಕಾಲೇಜಿನ, ವೀರಭದ್ರ ಚಲನಚಿತ್ರ ಮಂದಿರದ ಜಾಗವನ್ನ ಕೇಳ್ತಾಯಿಲ್ಲ. ಮುಂದಿನ ನಮಾಜ್ ಗೆ ಅವಕಾಶವನ್ನ ಬಿಜೆಪಿ ಬಿಡಲ್ಲ ಎಂದು ಗುಡುಗಿದರು.
ಇದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಏ.8 ರ ಒಳಗೆ ಈ ಹಿಂದೆ ಇರುವ ಸ್ಥಿತಿಯಂತೆ ಮೈದಾನ ಬಳಕೆಯಾಗಬೇಕು. ಈಗಾಗಲೇ ತಡವಾಗಿದೆ. ಏ.9 ರಂದು ಭಾರಿ ಪ್ರಮಾಣದ ಪ್ರತಿಭಟನೆ ನಡೆಸಲಾಗುವುದು. ಹುನ್ನಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರು ಪೊಲೀಸರಿಗೆ ಬೇಕಾದ ವ್ಯಕ್ತಿಯ ರಕ್ಷಣೆಗೆ ಜಿಲ್ಲಾಡಳಿತ ನಿಲ್ಲುವ ಸ್ಥಿತಿ ನಿರ್ಮಾಣವಾಗಲಿದೆ. ಒಂದು ವೇಳೆ ಸರಿಪಡಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಎಂಎಲ್ ಸಿಗಳಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ದತ್ತಾತ್ರಿ, ರುದ್ರೇಗೌಡ, ಮಾಲ್ತೇಶ್, ದೀನ್ ದಯಾಳ್, ನಾಗರಾಜ್ ಚಂದ್ರಶೇಖರ್, ಶ್ರೀನಾಗ್ ಉಪಸ್ಥಿತರಿದ್ದರು.