Suddilive || Shivamogga
ಮುಸುಕು ಹಾಕಿಕೊಂಡ ಬಂದ 10ಕ್ಕೂ ಹೆಚ್ಚು ಜನ ದರೋಡೆಕೋರರು-More than 10 masked robbers
ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಉತ್ತರಾದಿ ಮಠದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ. ರಾತ್ರಿ ಮಠಕ್ಕೆ ನುಗ್ಗಿದ ಮಂಕಿಕ್ಯಾಪ್ ಧರಿಸಿದ 10ಕ್ಕೂ ಹೆಚ್ಚು ದರೋಡೆಕೋರರು ಲಾಂಗು, ಮಚ್ಚು ತೋರಿಸಿ ಹೆದರಿಸಿರುವ ಪ್ರಕರಣ ನಡೆದಿದೆ.
ಮಠದಲ್ಲಿ ಇದ್ದ ಒಂದು ಲ್ಯಾಪ್ ಟಾಪ್, 50,000 ನಗದು, 4 ಮೊಬೈಲ್ ಕಿತ್ತುಕೊಂಡು ತೆರಳಿದ್ದಾರೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಚಿನ್ನಾಭರಣಗಳ ಕಳ್ಳತನ ನಡೆಯಲಿಲ್ಲ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಮಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಭಾನುವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು ವಿಚಾರಣೆ ನಡೆಸಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಕೂಡ ಕಿತ್ತುಕೊಂಡು ಹೋಗಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು ದರೋಡೆಯಲ್ಲಿ ಸ್ಥಳೀಯರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಮಠದ ಪ್ರಮುಖರಿಗೆ ಧೈರ್ಯ ಹೇಳಿದರು.
More than 10 masked robbers