Mom, Dad ಮತ್ತು ಪ್ರಿಯಾ ಎಂದು ಹಚ್ಚೆ ಹಾಕಿಸಿಕೊಂಡಿದ್ದ ಯುವತಿ ನಾಪತ್ತೆ

Suddilive || Shivamogga

Mom, Dad ಮತ್ತು ಪ್ರಿಯಾ ಎಂದು ಹಚ್ಚೆ ಹಾಕಿಸಿಕೊಂಡಿದ್ದ ಯುವತಿ ನಾಪತ್ತೆ

Mom, dad

ಬ್ರಹ್ಮಾವರದ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯುವತಿ ನಾಪತ್ತೆಯಾಗಿದ್ದಾಳೆ. 

ಹೊನ್ನೆತಾಳು ಗ್ರಾಮದ ಸುರೇಶ್ ಎಂಬುವವರ 19 ವರ್ಷದ ಮಗಳು ಪ್ರಿಯಾಂಕ ಅಲಿಯಾಸ್ ಪಾರ್ವತಿ ಎಂಬ ಯುವತಿ ಬ್ರಹ್ಮಾವರದ ಸತ್ಯನಾಥ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಏ.21 ರಂದು ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದು ಈ ವರೆಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. 

ಈಕೆಯ ಚಹರೆ ತೆಳುವಾದ ಮೈಕಟ್ಟು, 4 ಅಡಿ 5 ಇಂಚು ಎತ್ತರ, ಕೋಲುಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡಕೈ ಮುಂಗೈ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ MOM DAD  ಮತ್ತು Priya ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾಳೆ. ಕನ್ನಡ ಮಾತನಾಡಲು, ಓದಲು ಬರೆಯಲು ಬಲ್ಲವಳಾಗಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. 

ಈ ಯುವತಿ ಪತ್ತೆಯಾದಲ್ಲಿ ಶಿವಮೊಗ್ಗಜಿಲ್ಲೆ :- 08182-261400, ತೀರ್ಥಹಳ್ಳಿ :- 08181 – 220388, ಮಾಳೂರು :- 9480803333, ಆಗುಂಬೆ :- 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Mom, Dad

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close