suddilive || Shivamogga
Modi's decision welcomed - Eshwarappa
ದೇಶದ ಕಾಶ್ಮೀರದಲ್ಲಿ ನರಮೇದ ನಡೆಸಿದ ನಂತರ ಮೋದಿ ಸಿದ್ದಾಂತದ ನಾಯಕರು, ಭಾರತದ ವಿಪಕ್ಷಗಳು ಒಟ್ಟಿಗೆ ನಿಂತಿರುವುದು ಸಂತೋಷ ತಂದಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹಾಡಿಹೊಗಳಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಅವರನ್ನ ಮೊದಲು ನಮ್ಮ ದೇಶಕ್ಕೆ ಬರಬೇಡ ಎಂದ ರಾಷ್ಟ್ರಗಳು ಇಂದು ಅವರನ್ನ ಅಪ್ಪಿಕೊಂಡಿದ್ದಾರೆ. ಪ್ರಪಂಚ ಹಾಡಿ ಹೊಗಳಿದ್ದಾರೆ. ಹಿಂದೂ ಸಮಾಜ ಛಿದ್ರ ಛಿದ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿವೆ.
ದೇಶದ ಎಲ್ಲ ಜಾತಿಗಳನ್ನ ಛಿದ್ರ ಮಾಡಿದ್ದರು. ಆದರೆ ಹಿಂದೂಗಳು ಭಾರತ ಮಾತೆಯ ಮಕ್ಕಳು ಎಂದು ಒಗ್ಗಟ್ಟು ತೋರಿಸಿಕೊಟ್ಟಿದ್ದಾರೆ. ಹಿಂದೂಗಳನ್ನ ಟಾರ್ಗೆಟ ಮಾಡಿ ನರಮೇದ ನಡೆಸಲಾಗಿದೆ. ಇದನ್ನ ಒಗ್ಗಟ್ಟಿನಲ್ಲಿ ಎದುರಿಸಲಾಯಿತು. ವಿಪಕ್ಷಗಳು ನರಮೇದ ನಡೆದಾಗ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾಗಾಂಧಿ ಸರ್ಕಾರಕ್ಕೆ ನೀಡಿದ ಬೆಂಬಲದಂತೆ ಎಐಸಿಸಿ ಅಧ್ಯಕ್ಷ ಖರ್ಗೆ ತೆಗೆದುಕೊಂಡಿರುವುದು ಸಂತೋಷ ತಂದಿದೆ ಎಂದರು.
ಬಿಹಾರಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಉಗ್ರರ ವಿರುದ್ಧದ ಮಾತು ಖುಷಿ ತಂದಿದೆ. ಘಟನೆ ನಡೆದ ಎರಡು ದಿನಗಳಲ್ಲಿ ಸಿಂದೂ ನದಿಯ ನೀರು ಹಂಚಿಕೊಳ್ಳಲ್ಲ ಎಂದಿರುವುದು ದೈರ್ಯದ ಸಂಕೇತವಾಗಿದೆ. ಸಿಂದೂ ನದಿಯ ನೀರು ಪಾಕ್ ನ ಎರಡು ಸಿಟಿಗಳಿಗೆ ಕುಡಿಯುವ ನೀರು ಆಗಿದೆ. ಇದನ್ನ ಹೇಳಲು ದೈರ್ಯಬೇಕು. ಮುಸ್ಲೀಂ ರಾಷ್ಟ್ರಗಳು ಬೆಂಬಲಿಸಿದೆ ಎಂದರು.
ಸಿಂದೂ ನದಿಯ ನೀರು ಹಂಚಿಕೆ ರದ್ದುಗೊಳಿಸುವ ಮೂಲಕ ನುರಿತ ರಾಜಕಾರಣಿ ಎಂವುದು ತಿಳಿದು ಬಂದಿದೆ. ಅಮಾಯಕರ ಕಗ್ಗೊಲೆ ನಮಗೆ ನೋವುಂಟು ಮಾಡಿದೆ. ಸಿದ್ದರಾಮಯ್ಯನವರು ಮೃತರ ಕುಟುಂಬಕ್ಕೆ 10 ಲಕ್ಷ ಘೋಷಣೆ ಮಾಡಿದ್ದಾರೆ ಇದನ್ನ 25 ಲಕ್ಷ ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಕಾಶ್ಮೀರದಲ್ಲಿ ನಡೆದ ನರಮೇದದಲ್ಲಿ ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆ. ಅದೊಂದು ಪಾಠ ಕಲಿಬೇಕು ಕಲಿಯುತ್ತಾರೆ. ತಮಿಳುನಾಡಿನ ಸುಬ್ರಹ್ಮಣ್ಯ ಸ್ವಾಮಿ ಪಾಕ್ ವಿರುದ್ಧ ಕ್ರಮ ಕೈಗೊಳ್ಳುವ ಮುಂಚೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ನೀಡಲಿ ಎಂದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಕೆಲವರಿಗೆ ರಾಜೀನಾಮೆ ಕೇಳುವ ಚಟವಿದೆ ಎಂದರು.
Modi's decision welcomed