Suddilive || Soraba
ಮಣ್ಣು ಹೊತ್ತ ಸಚಿವರು-Minister carrying soil
ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸಾಮಾನ್ಯ ಕೂಲಿ ಕಾರ್ಮಿಕನಾಗಿ ಮಣ್ಣು ಹೊತ್ತಿದ್ದಾರೆ. ಇದೇನಪ್ಪ ಸಚಿವರ‌್ಯಾಕೆ ಹೀಗೆಮಣ್ಣು ಹೊತ್ತಿದ್ರು ಎಂದು ಭಾವಿಸಬೇಡಿ, ಉದ್ಯೋಗ ಖಾತರಿ ಯೋಜನೆಯ ಅಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಗುದ್ದಲಿ, ಪಿಕಾಸೆ, ಬಾಂಡ್ಲಿಯನ್ನ ಹಿಡಿದು ನಿಂತ ಸಚಿವರು ಹುರಳಿ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ಶಂಕು ಸ್ಥಾಪನೆ ಮತ್ತು ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನರೇಗಾ ಅಡಿ 4 ಲಕ್ಷ 80 ಸಾವಿರ ರೂ. ಕಾಮಗಾರಿಗೆ ಸಚಿವರು ಮಣ್ಣು ಹೋರುವ ಮೂಲಕ ಚಾಲನೆ ನೀಡಿದ್ದಾರೆ.
ಅಚ್ಚರಿ ಎಂದರೆ ಸಚಿವರು ಪಿಕಾಸೆ ಹಿಡಿದು ಕಾಂಪೌಂಡ್ ಗೆ ಗುದ್ದಲಿ ಏಟು ನೀಡುತ್ತಿದ್ದಂತೆ ಇಡಿ ಕಾಂಗ್ರೆಸ್ ಕಾರ್ಯಕರ್ತರೇ ಬಾಂಡ್ಲಿ ಹೊತ್ತು ಶ್ರಮದಾನ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಸುಮಾರು 83 ಮೀಟರ್ ಕಾಂಪೌಂಡು, ಇದರ ಜೊತೆ 7 ಲಕ್ಷ ರೂ. ನಲ್ಲಿ ಶಾಲೆಯ ಅಡುಗೆ ಕೋಣೆ 36 ಚದರ ಮೀಟರ್ ನ್ನ ನರೇಗಾದ ಶ್ರಮದಾನ ಕಾರ್ಯಕ್ರಮದಲ್ಲಿ ಅಭಿವೃದ್ದಿ ಪಡಿಸಲು ಚಾಲನೆ ದೊರೆತಿದೆ. ಈ ಕಾರ್ಯಮದಲ್ಲಿಯೇ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಸಹ ಆಯೋಜಿಸಲಾಗಿತ್ತು.
Minister carrying soil