Suddilive || Shivamogga
ಪಂಚಭೂತಗಳಲ್ಲಿ ಲೀನವಾದ ಮಂಜುನಾಥ ರಾವ್-Manjunatha paid his last respects with full state honours
ಪಂಚಭೂತಗಳಲ್ಲಿ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ಲೀನವಾಗಿದ್ದಾರೆ. ಮಗ ಅಭಿಜೈ ನಿಂದ ವಿಧಿ ವಿಧಾನಗಳನ್ನಪೂರೈಸಿ ಮಂಜುನಾಥ ರಾವ್ ಅವರ ಚಿತೆಗೆ ಬೆಂಕಿಯಿಡಲಾಗಿದೆ. ಪತ್ನಿ ಪಲ್ಲವಿಯವರ ಕಣ್ಣಲ್ಲಿ ಕಣ್ಣೀರು ತುಂಬಿದೆ.
ಮಧ್ಯಾಹ್ನ 12-43 ಕ್ಕೆ ಹೊರಟ ಮಂಜುನಾಥರ ಪಾರ್ಥೀವ ಶರೀರ 3 ಗಂಟೆಗೆ ರೋಟರಿ ಚಿತಾಗಾರ ತಲುಪಿದೆ. ಮಂಜುನಾಥ್ ರಾವ್ ಅಂತ್ಯಸಂಸ್ಕಾರ ಆರಂಭವಾಗಿದೆ.
ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯುತ್ತಿದ್ದರೆ. ಮತ್ತೊಂದೆಡೆ ಜಿಲ್ಲಾಡಳಿತ ವತಿಯಿಂದ ಸರ್ಕಾರಿ ಗೌರವ ಸಲ್ಲಿಕೆಮೂರು ಸುತ್ತು ಕುಶಾಲ ತೋಪು ಹಾರಿಸಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ರಾಷ್ಟ್ರಗೀತೆಯೊಂದಿಗೆ ಕುಶಾಲತೋಪು ಹಾರಿಸಲಾಯಿತು, ಗೌರವ ವಂದನೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಡಿಸಿ ಗುರುದತ್ ಹೆಗಡೆ, ಎಸ್ಪಿ ಜಿ.ಕೆ. ಮಿಥುನ ಕುಮಾರ್, ಪೂರ್ವ ವಲಯ ಐಜಿಪಿ ರವಿ ಕಾಂತೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಮಂಜುನಾಥರ ಪಾರ್ಥೀವ ಪಂಚಭೂತಗಳಲ್ಲಿ ಲೀನವಾಗಲಿದೆ. ಬ್ರಾಹ್ಮಣ ಸಂಪ್ರದಾಯದಂತೆ ಚಿತೆಗೆ ಅಗ್ನಿ ಸ್ಪರ್ಷವಾಗಿದೆ.
ಈ ವೇಳೆ ಮಾತನಾಡಿದ ಪತ್ನಿ ಪಲ್ಲವಿ ಪಹಲ್ಗಾಮ್ ಗೆ ಮೂರು ಕುದುರೆಗಳನ್ನ ಬಾಡಿಗೆ ಪಡೆದು ಮಂಗಳವಾರ ಮಧ್ಯಾಹ್ನ 12-30 ಕ್ಕೆ ತಲುಪಿದ್ವಿ. ಗುಂಡು ಹಾರಿಸಲಾಯಿತು. ಇದು ಪಟಾಕಿ ಇರಬೇಕು ಎಂದು ತಿಳುದ್ವಿ, ಎಕೆ 47 ಗನ್ ಹಿಡಿದು ಬಂದ ವ್ಯಕ್ತಿ ಪತಿಯನ್ನ ಗುಂಡಿಕ್ಕಿದ.
ನಾನು ನಮ್ಮನ್ನೂ ಕೊಲೆ ಮಾಡು ಎಂದೆ ಕೈಯಲ್ಲಿ ಬಂದೂಕು ಹಿಡಿದವ ಮೋದಿಗೆ ಹೋಗಿ ಹೇಳು ಅಂದ. ಉಗ್ರರು ಗುಂಡಿಕ್ಕಿ ಕೊಂದ ಮೇಲೆ ಆರಾಮಾಗಿ ಇದ್ದರು. ಸೆಕ್ಯೂರಿಟಿ ಇರಲಿಲ್ಲ ಎಂದು ಪಲ್ಲವಿ ಕಣ್ಣೀರಿಟ್ಟಿದ್ದಾರೆ. ಸ್ಥಳೀಯರು ಸಹಾಯ ಮಾಡಿದರು. ಅಭಿಜೈಯನ್ನ ಸ್ಥಳೀಯನೊಬ್ಬ ಹೊತ್ತು ತಂದ. ಅಲ್ಲಿ ಹಿಂದೂ ಮುಸ್ಲೀಂ ಎಂದು ವರ್ಗಾಯಿಸುತ್ತಿದ್ದರು. ಸ್ಥಳೀಯರಿಗೆ ಗದರಿಸಿದ್ದರು. ಬಿಸ್ಮಿಲ್ಲಾ ಬಿಸ್ಮಿಲ್ಲಾ ಎಂದು ಹೇಳಿದ್ದಕ್ಕೆ ಬಿಟ್ಟರು. ಭಾರತೀಯರ ಬಗ್ಗೆ ಯೋಚನೆ ಮಾಡುವಂತೆ ಆಗ್ರಹಿಸಿದರು.
Manjunath last respects