Suddilive || Shivamogga
ಮಂಡಗದ್ದೆ: ಹೊಸ ವಿದ್ಯುತ್ ಪ್ರಸರಣ ಮಾರ್ಗ ಚಾಲನೆ; ಎಚ್ಚರಿಕೆ-Mandagadde warning -Mandagadde: New power transmission line inaugurated; warning
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 1x10 ಎಂವಿಎ ಶಕ್ತಿ ಪರಿವರ್ತಕ ಹಾಗೂ ಉದ್ದೇಶಿತ 110 ಕೆವಿ ಲಿಲೋ ಮಾರ್ಗವನ್ನು ಈಗಿರುವ ಶಿವಮೊಗ್ಗ- ಸೌತ್ ಕೆನರಾ ಲೈನ್ ವಿದ್ಯುತ್ ಮಾರ್ಗದಿಂದ ಮಂಡಗದ್ದೆ ವಿದ್ಯುತ್ ಉಪಕೇಂದ್ರದವರೆಗೆ ಸುಮಾರು 20 ಮೀಟರ್ ಪ್ರಸರಣ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಏ.30 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿಯಾದರೂ ಈ ಮಾರ್ಗವನ್ನು ಚಾಲನೆಗೊಳಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರು ಈ ಮಾರ್ಗದಲ್ಲಿ ಬರುವ ಗೋಪುರಗಳನ್ನು ಹತ್ತುವುದಾಗಲಿ, ದನಕರುಗಳನ್ನು ಕಟ್ಟುವುದಾಗಲಿ ವಾಹಕಗಳಿಗೆ ತಗುಲುವಂತೆ ವಸ್ತುಗಳನ್ನು ಎಸೆಯುವುದಾಗಲಿ ನಿಷೇಧಿಸಲಾಗಿದೆ. ಹಾಗೂ ಈ ಕೃತ್ಯದಿಂದ ಉಂಟಾಗುವ ಪರಿಣಾಮಗಳಿಗೆ ಅವರೇ ನೇರ ಹೊಣೆಗಾರರಾಗಿದ್ದು, ಕವಿಪ್ರನಿನಿಯು ಯಾವುದೇ ಜವಾಬ್ದಾರಿಯಾಗಿರುವುದಿಲ್ಲ ಹಾಗೂ ಪರಿಹಾರವನ್ನು ನೀಡುವುದಿಲ್ಲವೆಂದು ಶಿವಮೊಗ್ಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಯೋಜನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mandagadde warning