ಮೈದಾನದ ವಿಚಾರವಾಗಿ ಸಚಿವರ ಪ್ರತಿಕ್ರಿಯೆ ಏನಿತ್ತು?Maidan issue

 suddilive || Shivamogga

ಮೈದಾನದ ವಿಚಾರಚಾಗಿ ಸಚಿವರ ಪ್ರತಿಕ್ರಿಯೆ ಏನಿತ್ತು?What was the minister's response to the Maidan issue?

Maidan, issues

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಎದುರಿನ ಮೈದಾನದ ಕುರಿತು ಮತ್ತು ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು. 

ಮೈದಾನದ ವಿಷಯ ಇಡೀ ಶಿವಮೊಗ್ಗದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಇಂದು ಸಚಿವರ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ಸಹಜವಾಗಿ ಮೂಡಿತ್ತು. ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟದ ಉದ್ಘಾಟನೆಗೆ ನೆಹರೂ ಕ್ರೀಡಾಂಗಣಕ್ಕೆ ಬಂದಿದ್ದ ಸಚಿವರು ಈ ಕಾನೂನಿನ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರು ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ತಿಯಿಸೊಲ್ಲವೆಂದು ಹೇಳಿ ಕೈತೊಳೆದುಕೊಂಡರು. 

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಿಹಿ ಸುದ್ದಿ ಹೇಳಿದ ಸಚಿವರು 9 ಸಾವಿರ ಕುಟುಂಬಗಳು ಇದರ ಲಾಭಪಡೆದುಕೊಳ್ಳಬೇಕು. ಸರ್ವೆಗೆ ಬರುವ ಅಧಿಕಾರಿಗಳೊಂದಿಗೆ ಸಹಕರಿಸಿಕೊಂಡು ಸರಿಯಾಗಿ ಸರ್ವೆ ಮಾಡಿಕೊಳ್ಳಿ ಎಂದು ಕರೆ ನೀಡಿದರು. 

Maidan issue

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close