ಲವ್ ಜಿಹಾದ್ ಎಂದು ಇಬ್ಬರು ಪೊಲೀಸರಿಗೆ ಒಪ್ಪಿಸಿದ ಹಿಂದೂ ಸಂಘಟನೆಗಳು-love jihad

 Suddilive || Shivamogga

Hindu organizations handed over two persons to the police, accusing him of love jihad


ಶಿಕಾರಿಪುರದಿಂದ ಬಂದ ಜೋಡಿಯೊಂದು ಲವ್ ಜಿಹಾದ್ ನಲ್ಲಿ ಬಿದ್ದಿದೆ ಎಂದು ಆರೋಪಿಸಿ ಹಿಂದೂ ಸಂಘಟನೆ ಜೋಡಿಗಳನ್ನ ಹಿಡಿದು ಜಯನಗರ ಪೊಲೀಸರಿಗೆ ಒಪ್ಪಿಸಿದೆ. 

ಹುಡುಗಿ ಮೈನರ್ ಆಗಿದ್ದು ಆಕೆಯನ್ನ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿ ಎಂಬುದು ಹಿಂದೂ ಸಂಘಟನೆಯ ವಾದವಾದರೆ ಆಕೆಯನ್ನ ವಾಪಾಸ್ ಶಿಕಾರಿಪುರಕ್ಕೆ ಕಳುಹಿಸಲಾಗುವುದು ಎಂದು ಜಯನಗರ ಪೊಲೀಸರು ಪಟ್ಟುಹಿಡಿದಿದ್ದು ಹುಡುಗಿ ಮೇಜರ್ ಆಗಿದ್ದಾಳೆ ಎಂಬುದು ಪೊಲೀಸರ ವಾದವಾಗಿದರೆ ಆಕೆ ಮೈನರ್ ಎಂಬುದು ಹಿಂದೂ ಸಂಘಟನೆಯ ವಾದವಾಗಿದೆ. 



ಇದು ಲವ್ ಜಿಹಾದ್ ಅಲ್ಲ ಹುಡುಗಿಯ ತಾಯಿಯೇ ಹುಡುಗನ ಜೊತೆ ಒಪ್ಪಿಗೆಯಿಂದ ಅವರ ನೆಂಟರ ಮನೆಗೆ ಕಳುಹಿಸಿದ್ದಾಳೆ ಎಂಬುದು ಪೊಲೀಸರ ವಾದ. ಡಿವೈಎಸ್ಪಿ ಸಂಜೀವ್ ಕುಮಾರ್, ಪಿಐ ಸಿದ್ದೇಗೌಡ, ಪಿಎಸ್ಐ ನವೀನ್ ಕುಮಾರ್ ನೇತೃತ್ವದಲ್ಲಿ ಹಿಂದೂ ಸಂಘಟನ ಕಾರ್ಯಕರ್ತರೊಂದಿಗೆ ಯುವತಿಯನ್ನ ಸಾಂತ್ವಾನ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 

ಶಿಕಾರಿಪುರದಿಂದ ಬಂದ ಜೋಡಿ ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ನಂತರ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿರುವ ವೇಳೆ ಹಿಂದೂ ಸಂಘಟನೆಯ ಕೈಗೆ ಸಿಕ್ಕಿದೆ. ಹಿಂದೂ ಸಂಘಟನೆ ಜಯನಗರ ಪೊಲೀಸರಿಗೆ ಹಸ್ತಾಂತರಿಸಿದೆ. ಸಂಜೀವ್ ಕುಮಾರ್ ನೇತೃತ್ವದಲ್ಲಿ ಯುವತಿಯನ್ನ  ಸುರಭಿ ಸಾಂತ್ವಾನಕೇಂದ್ರಕ್ಕೆ ಬಿಡುವಂತೆ ನಿರ್ಧರಿಸಲಾಗಿದೆ

love jihad


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close