Suddilive || Shivamogga
As his son Abhijai said, "Kute Mujebi Marlo"
ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ಅವರ ಮಗ ದ್ವಿತೀಯ ಪಿಯುಸಿಯಲ್ಲಿ 98% ಅಂಕ ಪಡೆದ ಹಿನ್ನಲೆಯಲ್ಲಿ ಪ್ರವಾಸ ಕೈಗೊಂಡಿತ್ತು. ಪ್ರವಾಸದಲ್ಲಿ ಮಗನ ಮುಂದೆಯೇ ಉಗ್ರರು ತಂದೆಗೆ ಗುಂಡೇಟು ಹೊಡೆದು ಕೊಲೆ ಮಾಡಿದ್ದಾರೆ.
ಈ ವೇಳೆ ಮಗ ಅಭಿಜೈ ಯಾನೆ ಅಭಿ 8 ವರ್ಷದ ವಯಸ್ಸಾದರೂ ಉಗ್ರರ ವಿರುದ್ಧ ವೀರಾವೇಶದ ಮಾತನ್ನಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಉಗ್ರರು ಬಂದು ಹೆಸರು ಕೇಳಿ ಹಿಂದೂ ಅಂತ ಗೊತ್ತಾದ ಬಳಿಕ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ.
ಮ್ಯಾಮ್ ಕೋಸ್ ನ ಎಂಪ್ಲಾಯ್ ಪಲ್ಲವಿಯಾಗಿದ್ದಾರೆ. ಆದರೆ, ಈ ಆನಂದದ ಕ್ಷಣಗಳು ದುರಂತದಲ್ಲಿ ಅಂತ್ಯವಾಗಿವೆ. ಇನ್ನೂ ಕಣ್ಮುಂದೆಯೇ ಅಪ್ಪನನ್ನು ಕೊಂದ ಉಗ್ರರಿಗೆ ಅಭಿ ಹೇಳಿದ್ದು ಈ ಮಾತು. ಈ ಬಗ್ಗೆ ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮದವರ ಜೊತೆ ಹೇಳಿದ್ದಾರೆ. "ನಮ್ಮ ಅಪ್ಪನನ್ನು ಕೊಂದಿದ್ಯಾ, ಕುತ್ತೆ ನಮ್ಮನ್ನು ಕೊಂದುಬಿಡು" ಅಂತ ಹೇಳಿದ್ದರಂತೆ. ಕಣ್ಮುಂದೆಯೇ ಗನ್ ಹಿಡಿದುಕೊಂಡು ನಿಂತಿದ್ದ ಉಗ್ರರಿದ್ದರು ಕುತ್ತೆ ಅಂತ ಧೈರ್ಯವಾಗಿ ಹೇಳಿರೋದು ನಿಜಕ್ಕೂ ಆ ಯುವಕನ ಧೈರ್ಯ ಎಂಥದ್ದು ಅಂತ ಸಾಬೀತಾಗಿದೆ.
ಈ ಕುರಿತು ಪತ್ನಿ ಪಲ್ಲವಿ ಸಹ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನನ್ನ ಹಾಗೂ ನನ್ನ ಮಗನನ್ನೂ ಕೊಲ್ಲಿ ಎಂದು ಉಗ್ರರ ಎದುರು ನಾನು ಕಣ್ಣೀರಿಟ್ಟೆ. ಆದರೆ, ನೀನು ಹೆಂಗಸು ನಿನ್ನನ್ನು ಕೊಲ್ಲೋದಿಲ್ಲ. ಇದನ್ನ ನೀನು ಮೋದಿಗೆ ಹೋಗಿ ತಿಳಿಸು ಎಂದಿರುವುದಾಗಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್, ಎಂಎಂಕೆಒಎಸ್‌ನಲ್ಲಿ ಕೆಲಸ ಮಾಡುತ್ತಿರುವ ಪತ್ನಿ ಪಲ್ಲವಿಯವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದರು. ಈ ಘಟನೆಯಿಂದ ಅವರ ವಿಜಯನಗರದ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಸ್ಥಳೀಯರು ಮತ್ತು ಸಂಬಂಧಿಕರು ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ಈ ಘಟನೆಯನ್ನ ಲಷ್ಕರೇ ತೋಯಿಬಾದ ಒಂದು ವಿಂಗ್ ಟಿಆರ್ ಎಫ್ (ರೆಸಿಸ್ಟೆಂಟ್ ಫ್ರಂಟ್) ಈ ದಾಳಿಯನ್ನ ಮಾಡಿರುವುದಾಗಿ ಒಪ್ಪಿಕೊಂಡಿದೆ.
Kute Mujebi Marlo