ಕುಂದಾದ್ರಿ ಬೆಟ್ಟದ ಮೇಲೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ-Kundadri hills

Suddilive || Thirthahalli

ಕುಂದಾದ್ರಿ ಬೆಟ್ಟದ ಮೇಲೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ-A body was found burnt on Kundadri hills

Kundadri, hills

ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಕುಂದಾದ್ರಿ ಬೆಟ್ಟದ ಮೇಲಿನ‌ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. 

ಸೋಮವಾರ ರಾತ್ರಿ ಟ್ರಕ್ಕಿಂಗ್ ತೆರಳಿದ್ದ ತಂಡವೊಂದು ಸುಟ್ಟ ಸ್ಥಿತಿಯಲ್ಲಿ ಇದ್ದ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗುಂಬೆ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ.

ಕುಂದಾದ್ರಿ ಬೆಟ್ಟದ ಮೇಲೆ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರ, ಇಸ್ಪೀಟು, ದಂಧೆ ಮುಂತಾದವು ನಡೆಯುತ್ತಿರುತ್ತದೆ ಎಂದು ಹಲವು ಬಾರಿ ಸ್ಥಳೀಯರಿಂದ ಹಾಗೂ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇದೀಗ ದೇಹವನ್ನು ಸುಟ್ಟು ಹಾಕಲಾಗಿದ್ದು ಈ ಪ್ರಕರಣ ಮೂರರಿಂದ ನಾಲ್ಕು ದಿನಗಳ ಹಿಂದೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.


ಆಗುಂಬೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

Kundadri hills

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close