Suddilive || Shivamogga
ಪುಣ್ಯಾತ್ಮ ಮೋದಿಯಿಲ್ಲದಿದ್ದರೆ ಕಾಶ್ಮೀರ ಮಾರಾಟವಾಗಿಬಿಡುತ್ತಿತ್ತು-ಸಂಸದ-Without the holy Modi, Kashmir would have been sold out
- MP
ಕಾಶ್ಮೀರದಲ್ಲಿ ಪ್ರವಾಸಿಗರನ್ನ ಗುರಿಯಾಗಿಸಿಕೊಂಡು ನಡೆದ ನರಮೇಧ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. 26 ಜನರ ಸಾವಿಗೆ ದೇಶದಲ್ಲಿ ಪ್ರತಿಕಾರದ ಜ್ವಾಲೆ ಹೊತ್ತಿ ಉರಿಯುತ್ತಿದೆ.
ಈ ನಡುವೆ ಬಿಹಾರದಲ್ಲಿ ಪ್ರಧಾನಿ ಮೋದಿಯ ರೋಷಾಗ್ನಿ ಮಾತು, ಸರ್ವ ಪಕ್ಷ ಸಭೆಗೆ ಗೈರು ಕಾಶ್ಮೀರದಲ್ಲಿ ಭದ್ರತಾ ವೈಫಲ್ಯ ಇವೆಲ್ಲಾ ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದರೆ, ಆಡಳಿತ ಪಕ್ಷ ತಾಳ್ಮೆಯಿಂದ ನಿಧಾನವಾಗಿ ಪರ್ಸೆಪ್ಷನ್ ಬಿಲ್ಡ್ ಮಾಡಿ ಪಾಕ್ ನ್ನ ಕಟ್ಟಿಹಾಕುವ ಮೂಲಕ ತನ್ನಬೇಳೆ ಬೇಯಿಸಿಕೊಳ್ಳುವತ್ತ ಹೆಜ್ಹೆಹಾಕಿದೆ.
ಈ ನಡುವೆ ಸಿಎಂ ಸಿದ್ದರಾಮಯ್ಯ 26 ಜನರ ಜೀವ ಹೋದ ಮೇಲೆ ಭದ್ರತೆ ಗಟ್ಟಿ ಮಾಡಿಕೊಂಡರೆ ಏನು ಪ್ರಯೋಜನ ಎನ್ನುವ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪತ್ಯುತ್ತರವಾಗಿ ಸಂಸದ ರಾಘವೇಂದ್ರ ಸಿಎಂ ಸಿದ್ದರಾಮಯ್ಯನವರ ಕಾಳಜಿ ಸರಿಯಿದೆ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.
ಇದೇ ರೀತಿ ಅನುಕಂಪ ಡಿಜೆಹಳ್ಳಿ ಕೆಜಿ ಹಳ್ಳಿ, ಹುಬ್ಬಳಿಯ ಪೊಲೀಸ್ ಠಾಣೆಯ ಮೇಲೆ ಕಲ್ಲು ಬೆಂಕಿ ಹಚ್ಚಿದಾಗ ಆರೋಪಿಗಳನ್ನ ಬಿಡುಗಡೆ ಮಾಡಿ ಪೊಲೀಸರ ಜಂಘೀಬಲವನ್ನ ಕುಸಿಯುವಂತೆ ಮಾಡಿದ್ದರು. ನಮಗೆ ರಕ್ಷಣೆಯ ನಂಬಿಕೆಯಿರುವುದು ಪೊಲೀಸರ ಮೇಲೆ. ಪೊಲೀಸರ ಠಾಣೆಯ ಮೇಲೆ ದಾಳಿ ಮಾಡಿದವರ ಮಾನಸಿಕತೆ ಕುಗ್ಗಿಸುವಂತೆ ಮಾಡಿರುವುದು ಎಷ್ಟು ಸರಿ ಎಂದು ಕಾಲೆಳೆದಿದ್ದಾರೆ.
ಐಖ್ಯತೆ, ಏಕತೆಗೆ ಸಲಹೆ ನೀಡಬೇಕಾದ ಸಿಎಂ ಆರೋಪಗಳನ್ನ ಮಾಡುವ ಬದಲು ಸಲಹೆಗಳನ್ನ ನೀಡಲಿ. ನಮ್ಮ ದೇಶದ ನೀರು ಕುಡಿದು ನಮ್ಮ ವಿರುದ್ಧವೇ ವಿಷಕಕ್ಕುವ ವಿಷ ಜಂತುವಾಗಿರುವ ಪಾಕ್ ನ ಉಗ್ರರು ಇಷ್ಟುದಿನ ಆರ್ಮಿ ಮೇಲೆ ಅಟ್ಯಾಕ್ ಮಾಡುತ್ತಿದ್ದರು. ಈಗ ದೇಶದ ಪ್ರಜೆಗಳ ಮೇಲೆ ದಾಳಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ರಾಜಕೀಯ ನಡೆಸದೆ ಸರ್ಕಾರಕ್ಕೆ ಸಲಹೆ ಸೂಚನೆ ನೀಡಲಿ ಎಂದಿದ್ದಾರೆ.
ಅವರು ಸರಿಯಾಗಿ ನಡೆದುಕೊಳ್ಳದಿರುವ ಪರಿಣಾಮವಾಗಿ ಕಾಶ್ಮೀರ ಮಾರಾಟವಾಗುತ್ತಿತ್ತು. ಮೋದಿ ಪುಣ್ಯಾತ್ಮ ಪ್ರಧಾನಿಯಾಗದಿದ್ದರೆ ಕಾಶ್ಮೀರವನ್ನ ಕಾಂಗ್ರೆಸಿಗರು ಮಾರಾಟ ಮಾಡುತ್ತಿದ್ದರು ಎಂದು ಹೊಸ ಬಾಂಬ್ ಉರುಳಿಸಿದ್ದಾರೆ.
ಆರ್ಟಿಕಲ್ 370 ತೆಗೆದ ಪರಿಣಾಮವಾಗಿ ಒಳಗಡೆ ಇರುವ ವಿಷಕಾರುವವರು ಪಾಕ್ ಬೆಂಬಲಿತ ಉಗ್ರರಿಗೆ ಸಹಾಯಕರಾಗಿ ನಿಂತಿದ್ದಾರೆ. ರಾಬರ್ಟ್ ವಾದ್ರರ ಹಿಂದುತ್ವದ ತುಷ್ಠೀಕರಣದಿಂದ ದಾಳಿಯಾಗಿದೆ ಎಂಬ ಹೇಳಿಕೆ ಅಸಹ್ಯ ಹುಟ್ಟಿಸುವಂತಾಗಿದೆ. ಸಂತೋಷ್ ಲಾಡ್ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಇಳಿಯ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಎತ್ತರಕ್ಕೆ ಬೆಳೆಯಲಿ ಹಾಗಂತ ದೊಡ್ಡವರ ವಿರುದ್ಧ ಹಗೂರವಾಗಿ ಮಾತನಾಡುವುದನ್ನ ಬಿಡಲಿ ಎಂದಿದ್ದಾರೆ.
ಬಾರ್ಡರ್ ನಲ್ಲಿ ವಾತಾವರಣ ಬಿಗಿಯಿದೆ. ಸಂದರ್ಭ ಹೇಗೆ ಬರುತ್ತೆ ಹಾಗೆ ನಡೆದುಕೊಳ್ಳುವ ಸಂಧರ್ಭ ಕಾಣಿಸಿತ್ತಿದೆ ಎಂದರು.
Kashmir would have been sold out