Suddilive || Shivamogga
ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಕರವೇ ಕಾರ್ಯಕರ್ತರ ಪ್ರತಿಭಟನೆ-Karave demands action against officer who fired Janiwara
ಶಿವಮೊಗ್ಗದ ಏ.16 ನೇ ತಾರೀಖು ಸಿಇಟಿ ಪರೀಕ್ಷೆ ವೇಳೆ ನಡೆದ ಜನಿವಾರದ ಜಟಾಪಟಿಗೆ ಸಂಘಟನೆಯೊಂದು ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕರವೇ ಪ್ರವೀಣ್ ಶೆಟ್ಟಿ ಬಣದ ಸಂಘಟನೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿನೂತನವಾಗಿ ಪ್ರತಿಭಟಿಸಿ ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಅನ್ಯಾಯವಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಸಾಂಪ್ರದಾಯಿಕ ಉಡುಗೆ ಪಂಚೆ, ಶಲ್ಯ ತೊಟ್ಟು ಬಂದ ಕರವೇ ಪ್ರತಿಭಟನಾಕಾರರು ವಿನೂತನ ಪ್ರತಿಭನೆಗೆ ಮುಂದಾಗಿದ್ದಾರೆ.
ಜನಿವಾರ ತೆಗೆಸುವ ಮೂಲಕ ಹಿಂದೂ ಭಾವನೆಗಳಿಗೆ ಅನ್ಯಾಯವಾಗಿದೆ. ಸರ್ಕಾರ ತಕ್ಷಣವೇ ಸರಿಪಡಿಸಿಕೊಂಡು ಶಿವಮೊಗ್ಗ ಮತ್ತು ಬೀದರ್ ನ ವಿದ್ಯಾರ್ಥಿಗೆ ಅನ್ಯಾಯವನ್ನ ಸರಿಪಡಿಸಬೇಕೆಂದು ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಕರವೇಯ ಮುರುಳಿ, ಸುರೇಶ್ ಮೊದಲಾದವರು ಭಾಗಿಯಾಗಿದ್ದರು.
Karave demands action against officer