ಕನ್ನಡದ ರಾಮಾಚಾರಿ ಹಾಡಿಗೆ ಲಾಂಗು ಹಿಡಿದ ಯುವಕ-ಬಿತ್ತು ಕೇಸ್!Kannada song 'Ramachari'

 Suddilive || Shivamogga

ಕನ್ನಡದ ರಾಮಾಚಾರಿ ಹಾಡಿಗೆ ಲಾಂಗು ಹಿಡಿದ ಯುವಕ-ಬಿತ್ತು ಕೇಸ್! Case filed against youth who sang Kannada song 'Ramachari'

Kannada, songs

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಡುವುದು ಸಹಜ ಆದರೆ ಭರ್ಜಿ, ಲಾಂಗು, ಮಚ್ಚು, ಮೊದಲಾದ ಆಯುಧಗಳನ್ನ ಹಿಡಿದು ವಿಡಿಯೋ ಮಾಡಿದವರ ವಿರುದ್ಧ ಸುಮೋಟೋ ಪ್ರಕರಣಗಳು ದಾಖಲಾಗುತ್ತಿದೆ.

ನಿನ್ನೆ ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಯಾಸಿನ್ ಖರೇಶಿ ಜೊತೆಗೆ ಲಾಂಗು ಹಿಡಿದು ಪ್ರಕರಣ ದಾಖಲಾದ ಬೆನ್ನಲ್ಲೇ  ಕೋಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಅದಕ್ಕೆ ಕನ್ನಡದ ರಾಮಾಚಾರಿ ಹಾಡನ್ನ ಹಾಕಲಾಗಿದ್ದು, ಇದು ಸಾರ್ವಜನಿಕರ ಶಾಂತಿಗೆ ದಕ್ಕೆ ಉಂಟು ಮಾಡುವ ವಿಡಿಯೋ ಎಂದು ಸುಮೋಟೊ ದಾಖಲಾಗಿದೆ. 

ಫೈಜಾನ್  ಎಂಬುವನು ಕಾರಿನಲ್ಲಿ ಕುಳಿತುಕೊಂಡು ಉದ್ದನೆಯ ಭರ್ಜಿ ಹಿಡಿದು ಕುಳಿತಿದ್ದು ಅದಕ್ಕೆ ಕನ್ನಡ ಸಿನಿಮಾದ ರಾಮಾಚಾರಿ ಹಾಡನ್ನ ಹಾಕಿ ಭಯ ಹುಟ್ಟಿಸುವ ರೀತಿಯಲ್ಲಿ ಮೊಮದ್ ಶಾಬಾದ್ ಎಂಬುವನ ಇನ್ ಸ್ಟಾಗ್ರಾಮ್ ನಲ್ಲಿ ಹರಿ ಬಿಟ್ಟಿದ್ದನು. ಈ 14 ಸೆಕೆಂಡ್ ವಿಡಿಯೋ ವಿರುದ್ಧ ಮತ್ತು ಫೈಜಾನ್ ಮತ್ತು ಮೊಹಮದ್ ಶಾಬಾದ್ ವಿರುದ್ಧ ಪ್ರಕರಣ ದಾಖಲಾಗಿದೆ. 

Kannada song 'Ramachari'


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close