Suddilive || Bhadravathi
ಪಾಕಿಸ್ತಾನ ನಿಮ್ಮಪ್ಪಂದಾ? ನಿಮ್ಮಜ್ಜಿಗೆ ವರದಕ್ಷಿಣೆಗೆ ಬಂದಿದ್ದ ಎಂದು ಪೋಸ್ ಹಾಕಿದವನಿಗೆ ಬಿತ್ತು ಕೇಸ್-Is Pakistan belongs to your father? if he had come for dowry to his grandmother? A case has been filed against a man
ಪಾಕಿಸ್ತಾನಕ್ಕೆ ಏನೂ ಕಿತ್ತುಕೊಳ್ಳಲು ಆಗೊಲ್ಲ ಎಂಬ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವನ ವಿರುದ್ಧ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಇನ್ ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟ ಸಾದತ್ ಕಾಲೋನಿಯ ಸೂಫಿಯಾನ್ ಮತ್ತು ಇತರನೊಬ್ಬನ ವಿರುದ್ಧ ದೂರುದಾಖಲಾಗಿದೆ.
ಇನ್ ಸ್ಟಾ ಗ್ರಾಮ್ ನಲ್ಲಿ ಸೂಫಿಯಾನ್ ರೀಲ್ಸ್ ಮಾಡಿ ಸಲಾಂ ವಾಲೇಕೂಂ, ಎಲ್ಲರಿಗೂ ನಮಸ್ತೆ, ವಿಡಿಯೋ ಡಾಲ್ತು ದೇಖಲೇತೂ ಎಂದು ಬಸವಣ್ಣನ ಭಾವಚಿತ್ರ ಇರುವ, ಕೆಂಪು ಶಾಲು ಹಾಕಿಕೊಂಡಿರುವ ವ್ಯಕ್ತಿಯನ್ನ ತೋರಿಸಿ ಯಾರೋ ಇಬ್ಬರ ಭಾವ ಚಿತ್ರ ತೋರಿಸಿ ಅವನು ಬಂದ ಏನೂ ಕಿತ್ತುಕೊಳ್ಳಲು ಆಗಲಿಲ್ಲ,
ಇವನು ಬಂದ ಏನೂ ಕಿತ್ತುಕೊಳ್ಳಲಾಗುತ್ತಿಲ್ಲ, ಈಗ ನೀನು ಬಂದಿದ್ದೀಯಾ ಪಾಕಿಸ್ತಸನ ನಿಮ್ಮಪ್ಪಂದಾ? ಇಲ್ಲ ನಿಮ್ಮಜ್ಜಿಗೆ ಬಂದ ವರದಕ್ಷಿಣೆನಾ? ನಮಗೆ ವಾರ್ನಿಂಗ್ ಕೊಡ್ತೀಯ ನಾವೇ ನಿನಗೆ ವಾರ್ನಿಂಗ್ ಕೊಡ್ತೀವಿ, ನೆಕ್ಸ್ಟ್ ಟೈಮ್ ನಿಮಗೆ ವಿಡಿಯೋ ಬರಬಾರದು, ಬಂತು ಅಂದರೆ ಇದಕ್ಕಿಂತ ಅ್ಪನಹಾಗೆ ಟ್ರೋಲ್ ಮಾಡ್ತೀನಿ ಎಂದು ಬಿಸ್ಮಿಲ್ಲಾ ಎಂದು ಹಾಡನ್ನ ಜೋಡಿಸಿದ್ದಾನೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ದ್ವೇಷ ಭಾವನೆ ಹುಟ್ಟುಹಾಕುವ ಉದ್ದೇಶದ ಹಿನ್ನಲೆಯಲ್ಲಿ ಸೂಫೀಯಾನ್ ಮತ್ತು ಇನ್ನೊಬ್ಬನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
Is Pakistan belongs to your father?