Suddilive || Shivamogga
ಭಾರತ ಪಾಕ್ ನ್ನ ಹಿಚುಕಿ ಹಾಕಲಿದೆ-ಈಶ್ವರಪ್ಪ-India will crush Pakistan - Eshwarappa
ಪಾಕಿಸ್ತಾನ 30 ವರ್ಷದಿಂದ ಭಯೋತ್ಪಾದಕತೆಯನ್ನ ಬೆಳೆಸುತ್ತಾ ಬಂದಿದ್ದೇವೆ ಎಂದು ಅಲ್ಲಿನ ಸಚಿವ ಒಪ್ಪಿಕೊಂಡಿದ್ದಾನೆ. ಯುದ್ದ ನಡೆದರೆ ಭಾರತ ಪಾಕ್ ನ್ನ ಹಿಚುಕಿ ಹಾಕಲಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಾರತದ ಆರ್ಮಿ ಫೋರ್ಸ್ ಗೂ ಪಾಕ್ ಸೇನೆಗೂ ಹೊಂದಾಣಿಕೆಯಿಲ್ಲ. ಕಾಶ್ಮೀರಕ್ಕೆ ಹೋಗಿ ಬಂದ ಸಂತೋಷ್ ಲಾಡ್ ಓಡಾಡಿದ್ದನ್ನ ನೋಡಿ ಮೆಚ್ಚಿಕೊಂಡಿದ್ದೆ. ಆದರೆ ನಿನ್ನೆ ಬಂದು ರಾಜಕಾರಣ ಮಾಡಿದ್ದಾನೆ. ಇವರು ಮೋದಿಯವರ ಕ್ಷಮೆ ಕೇಳಬೇಕು ಎಂದರು.
ಇಂಟಲಿ ಜೆನ್ಸಿ ಫೇಲ್ಯೂರು ಎಂದು ಯಾರೂ ಹೇಳಬೇಡಿ. ಫೇಲ್ಯೂರ್ ಆಗಿದ್ದರೆ ಪಾಠ ಕಲಿತುಕೊಳ್ಳುತ್ತಾರೆ. 140 ಜನ ನರೇಂದ್ರ ಮೋದಿ ಜತೆ ಇರ್ತಾರೆ. ಪಾಕ್ ಮರ್ಯಾದೆಯಿಂದ ಇದ್ದರೆ ಜೀವಂತವಾಗಿರುತ್ತಾರೆ. ಆಗಿರುವ ತಪ್ಪನ್ನ ಒಪ್ಪಿ ಭಾರತಕ್ಕೆ ಶರಣಾಗಬೇಕು. ಇಲ್ಲವೆಂದರೆ ಉಳಿಗಾಲವಿಲ್ಲದಂತಾಗುತ್ತೆ ಎಂದ ಅವರು ಪಾಕಿಸ್ತಾನ ಬಿಲದಲ್ಲಿ ಇರುವಂತಹ ಇಲ್ಲಿಯಂತಾಗಿದೆ ಮೋದಿಯವರ ತಾಳ್ಮೆ ಮೆಚ್ಚಬೇಕು. ಇಡೀ ಪ್ರಪಂಚ ಮೋದಿಯನ್ನ ಮೆಚ್ಚಿಕೊಂಡಿದೆ ಎಂದರು.
ಇಂದಿರಾ ಗಾಂಧಿ ಸರ್ಕಾರ ಇದ್ದಾಗಲೇ ಇಂದಿರಾಗಾಂಧಿ ಹತ್ಯೆಯಾಯಿತು. ರಾಜೀವ್ ಗಾಂಧಿ ಹತ್ಯೆಯಾಯಿತು. ಇವೆಲ್ಲಾ ಇಂಟಲಿಜೆನ್ಸಿ ಫೆಲ್ಯೂರ್ ಆಗಲ್ವಾ ಹಾಗಾದರೆ. ಹಾಗಾಗಿ ಫೆಲ್ಯೂರ್ ನ್ನ ಸರಿ ಪಡಿಸೋಣ ಎಂದರು. ಇದೇ ವೇಳೆ ಯುಪಿಎಸ್ ಸಿ ಯಲ್ಲಿ 421 ನೇ ರ‌್ಯಾಂಕ್ ಪಡೆದ ಮೇಘನರ ಮನೆಗೆ ತೆರಳಿ ಈಶ್ವರಪ್ಪ ಶುಭಕೋರಿದ್ದಾರೆ.
India will crush Pakistan - Eshwarappa