Suddilive ||
ಹಿಂದೂಗಳೇ ಟಾರ್ಗೆಟ್-Hindus are the target!
ಜಮ್ಮು ಕಾಶ್ಮೀರದಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ಭಯೋತ್ಪಾದಕರು ದಾಳಿ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ.
ಶಿವಮೊಗ್ಗದಿಂದ ಹೋದ ಮಂಜುನಾಥ್ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ಭಯೋತ್ಪಾದಕರ ಪೈಶಾಚಿಕ ಕೃತ್ಯ ನಡೆದಿದೆ. ಹತ್ತಿರದಿಂದ ಶೂಟ್ ಮಾಡಲಾಗಿದೆ. ಪ್ರವಾಸಿಗರು ಪಾನಿಪುರಿ ತಿನ್ಬುವಾಗ ಮಾತನಾಡಿಸುವ ಸೋಗಿನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾರೆ.
ಮುಸ್ಲೀಮೇತರರು ಎಂದು ತಿಳಿಯುತ್ತಿದ್ದಂತೆ ಗುಂಡಿನ ದಾಳಿ ನಡೆಸಲಾಗಿದೆ. ಪುರುಷರನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಲಾಗಿದೆ. ಭಾರತದಲ್ಲೇ ಹಿಂದೂಗಳು ಸುರಕ್ಷಿತವಾಗಿಲ್ಲವೆಂಬುದು ಸ್ಪಷ್ಟವಾಗುತ್ತಿದೆ. ಸಾಲಾಗಿ ನಿಲ್ಲಿಸಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆದಿದೆ.
ಮತ್ತೋರ್ವ ಕನ್ನಡಿಗೆ ಈ ದಾಳಿಯಲ್ಲಿ ಬಲಿಯಾಗಿದ್ದು ನಾಲ್ವರು ಕನ್ನಡಿಗರು ಗಾಯಗೊಂಡಿದ್ದಾರೆ. ಇದರಿಂದ ಭಯೋತ್ಪಾದಕರ ಗುಂಡಿಗೆ ಬಲಿಯಾದವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. ಮೊದಲು ಉಗ್ರರು ಟಾರ್ಗೆಟ್ ಮಾಡಿದ್ದೇ ಶಿವಮೊಗ್ಗದ ಮಂಜುನಾಥ್ ರಾವ್ ಮೇಲೆ ಗುಂಡಿನ ದಾಳಿ ನಡೆದಿದೆ.
Hindus are the target