ನಾಳೆಯಿಂದ ಎರಡು ದಿನಗಳಕಾಲ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ-Government Employees Association sports camp

 suddilive || Shivamogga

ನಾಳೆಯಿಂದ ಎರಡು ದಿನಗಳಕಾಲ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ-Government Employees Association sports camp for two days from tomorrow

Employes, association

32 ವರ್ಷದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ನಡೆಯುತ್ತಿದ್ದು, ಈ ಸಾಲಿನ ಕ್ರೀಡಾಕೂಟವು ನಾಳೆಯಿಂದ ಆರಂಭವಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್  ಮೋಹನ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.5 ಮತ್ತು 6 ರಂದು ಎರಡು ದಿನ ಜಿಲ್ಲಾ ಮಟ್ಟದ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 24 ಈವೆಂಟ್ಸ್ ನಡೆಯಲಿದೆ ಎಂದರು. 

ನೌಕರರ ಸರ್ವತ್ತೋಮ ಸೇವಾ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಏ.14ವರ ಒಳಗೆ https://sarvothamaawards.karnataka.gov.in ಲಿಂಕ್ ಬಳಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2024 ಮತ್ತು 2025 ನೇ ಸಾಲಿನ 2 ವರ್ಷಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಸಶ್ತಿ ನೀಡಲಾಗುತ್ತಿದೆ ಎಂದರು. 

ಎನ್ ಪಿ ಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸುವ ಬಗ್ಗೆ

ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರ ಹೋರಾಟ ಫಲವಾಗಿ ಸರ್ಕಾರವು ಡಿಫೈನ್ ಪಿಂಚಣಿ ಯೋಜನರಯನ್ನ ಮರಿಜಾರಿಗೊಳಿಸಿರುವ ರಾಜ್ಯಗಳಲ್ಲಿ ಡಿಫೈನ್ ಪಿಂಚಣಿಯನ್ನ ಮರುಜಾರಿಗೊಳಿಸಿರುವ ಕುರಿತು ಅಧ್ಯಾಯನ ನಡೆಸಿ ವರದಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಜ್ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಎಪ್ರಿಲ್ ತಿಂಗಳ ಅಂತ್ಯಲದೊಳಗೆ ವರದಿ ನೀಡಲಿದೆ ಎಂದರು. 

Government Employees Association sports camp for two days from tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close