suddilve || Shivamogga
ಗಡಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹಿಂದೂ ಸಂಘಟನೆಗಳು ಕೆಂಡಮಂಡಲವಾಗಿದ್ದೇಕೆ?Why are Hindu organizations gathering near the Gadi Anjaneya Swamy temple?
ಶಿವಮೊಗ್ಗಕ್ಕೆ ಪ್ರವೇಶಗೊಂಡ ಮಂಜುನಾಥ್ ಅವರ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಹೊಳೆ ಹೊನ್ನೂರು ರಸ್ತೆಯ ಮೂಲಕ ಪ್ರವೇಶಿಸುತ್ತಿದ್ದಂತೆ ಹಿಂದೂ ಸಂಘಟನೆಗಳು ರೊಚ್ಚಿಗೇಳುವ ಸ್ಥಿತಿ ನಿರ್ಮಾಣವಾಗಿದೆ.
ವಾಹನ ರೈಲ್ವೆ ಓವರ್ ವಬ್ರಿಡ್ಜ್ ಬಳಿಯ ಗಡಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬರುತ್ತಿದ್ದಂತೆ ಹಿಂದೂ ಸಂಘಟನೆಗಳು ಬಾವುಟ ಹಿಡಿದು ಸಿದ್ದತೆ ಗೊಂಡಿತ್ತು. ಆದರೆ ಅಂಬ್ಯೂಲೆನ್ಸ್ ನಿಲ್ಲಿಸದೆ ತುಂಗ ಬ್ರಿಡ್ಜ್ ಬಳಿ ಬಂದಿತ್ತು.
ಕೆಲ ಪೈಲಟ್ ವಾಹನಗಳು ಮುಂದೆ ಸಾಗಿದ್ದವು. ಸಂಚಾರಿ ಪೊಲೀಸ್ ಸಂತೋಷ್ ಕುಮಾರ್ ಅವರ ಸಮಯೋಚಿತ ಪ್ರಜ್ಞೆಯಿಂದಾಗಿ ವಾಹನ ನಿಂತಿತು. ಕೆಲ ಹಿಂದೂ ಸಂಘಟಕರು ಅಂಬ್ಯುಲೆನ್ಸ್ ಚಾಲಕನೊಂದಿಗೆ ಜಗಳಕ್ಕೆ ನಿಂತರು ನಂತರ ಸಮಾಧಾನಗೊಂಡು ಬೈಕ್ ರ‌್ಯಾಲಿ ಮೂಲಕ ವಾಹನ ಮುಂದೆ ಸಾಗಿವೆ.
ಸ್ವಯಂ ಪ್ರೇರಿತ ಬಂದ್ ಯಶಸ್ವಿ ಡೌಟ್
ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದ ಶಿವಮೊಗ್ಗದ ಮಂಜುನಾಥ್ ಅವರ ಪಾರ್ಥೀವ ಶರೀರ ಪಾದಯಾತ್ರೆ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಈಗಾಗಲೇ ಬಜಾರ್, ಹೂವಿನ ಮಾರ್ಕೆಟ್ ರಸ್ತೆ ಗಳಲ್ಲಿ ಕೆಲ ಅಂಗಡಿಗಳ ಬಂದ್ ಆದರೆ ಕೆಲವು ಅಂಗಡಿಗಳು ತೆರೆದು ವ್ಯಾಪಾರ ನಡೆಯುತ್ತಿದೆ.
ಹೂವಿನ ಮಾರ್ಕೆಟ್ ರಸ್ತೆಯಲ್ಲಿ ಎಲ್ಲ ಹೂವಿನ ಅಂಗಡಿಗಳು ವ್ಯಾಪರ ನಡೆಸುತ್ತಿವೆ. ಬಜಾರ್ ನಲ್ಲಿ ದಿನಸಿ, ಚಿನ್ನಾ ಬೆಳ್ಳಿ ವ್ಯಾಪಾರದ ಅಂಗಡಿ ಗಳು ಬಂದ್ ಆದರೆ ಕೆಲ ಹೋಟೆಲ್, ಹಣ್ಣಿನ ಅಂಗಡಿಗಳು ವ್ಯಾಪಾರ ಆರಂಭಿಸಿವೆ. ಇನ್ನೂ ಪಾದಯಾತ್ರೆಯ ವೇಳೆ ಬಂದ್ ಮಾಡುವ ಸಾಧ್ಯತೆ ಹೆಚ್ಚಿದೆ.
Gadi Anjaneya Swamy temple